Movie: Krishna Rukmini (1988)
Singer: SPB
Song link: Click Here
Karnatakada itihasadali, bangarada yugada katheyannu
Haaduve keli, na haaduve keli (2)
Karnatakada itihasadali ||
Jnanada jyotiyu, vidyaranyaru, anugraha gaida, bhumi idu..
Hakka bukkaru aalidarilli, harushada, maleyannu, ellu chelli
Vijayada kahaleya.. udidaru vijayanagara, stapane madidaru ||
Gandara ganda, dheera prachanda, krishnadevaraya, aalida vaibhavade
Kaligala naadu, kavigala beedu
Enisitu, hampeyu..aa dinade, kannada bavuta..haarisida
Madhurevaregu..rajyava, haradisida..
Karnatakada itihasadali ||
Sangeeta natyagala, sangamaville, shilpa kalegala.. taanavide..
Bhuvaneshwariya, tavarurille, yatigala, dasara..nele nadille
Pavana mannidu, hampeyadu, yuga yuga aliyada, keerti idu
Kannada bhumi, kannada nudiyu, kannada keerti, endendu baalali
Sirigannadam gelge, sirigannadam gelge, sirigannadam gelge ||
ಚಿತ್ರಗೀತೆ
ಕರ್ನಾಟಕದ ಇತಿಹಾಸದಲೀ, ಬಂಗಾರದ ಯುಗದಾ ಕಥೆಯನ್ನು
ಹಾಡುವೆ ಕೇಳಿ, ನಾ ಹಾಡುವೆ ಕೇಳಿ (೨)
ಕರ್ನಾಟಕದ ಇತಿಹಾಸದಲೀ।।ಪ।।
ಜ್ಞಾನದ ಜ್ಯೋತಿಯು, ವಿದ್ಯಾರಣ್ಯರು, ಅನುಗ್ರಹ ಗೈದ, ಭೂಮಿ ಇದೂ
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ, ಮಳೆಯನ್ನು, ಎಲ್ಲೂ ಚೆಲ್ಲಿ
ವಿಜಯದ ಕಹಳೆಯಾ, ಊದಿದರು ವಿಜಯನಗರ, ಸ್ಥಾಪನೆ ಮಾಡಿದರು ।।೧।।
ಗಂಡರ ಗಂಡ, ಧೀರ ಪ್ರಚಂಡಾ, ಕೃಷ್ಣದೇವರಾಯ, ಆಳಿದ ವೈಭವದೆ
ಕಲಿಗಳ ನಾಡು, ಕವಿಗಳ ಬೀಡು
ಎನಿಸಿತು,ಹಂಪೆಯೂ.. ಆ ದಿನದೇ , ಕನ್ನಡ ಬಾವುಟಾ, ಹಾರಿಸಿದಾ
ಮಧುರೆವರೆಗೂ ರಾಜ್ಯವ, ಹರಡಿಸಿದಾ
ಕರ್ನಾಟಕದ ಇತಿಹಾಸದಲೀ ।।೨।।
ಸಂಗೀತ ನಾಟ್ಯಗಳ, ಸಂಗಮವಿಲ್ಲೆ, ಶಿಲ್ಪಾ ಕಲೆಗಳಾ, ತಾಣವಿದೇ
ಭುವನೇಶ್ವರಿಯ, ತವರೂರಿಲ್ಲೆ, ಯತಿಗಳ, ದಾಸರಾ, ನೆಲೆ ನಾಡಿಲ್ಲೆ
ಪಾವನ ಮಣ್ಣಿದು, ಹಂಪೆಯದು, ಯುಗ ಯುಗ ಅಳಿಯದಾ, ಕೀರ್ತಿ ಇದು
ಕನ್ನಡ ಭೂಮಿ, ಕನ್ನಡ ನುಡಿಯು, ಕನ್ನಡ ನುಡಿಯು, ಕನ್ನಡ ಕೀರ್ತಿ, ಎಂದೆಂದು ಬಾಳಲಿ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ ।।೩।।
No comments:
Post a Comment