Movie: Nammura Mandara Hoove (1997)
Singers: SPB, Manjula Gururaj
Song link: Click Here
Manadaase hakkiyagi, mugilage teli teli (2)
Banadaage sutti sulidu, bayalage jeeki jeeki
Ho.. julu julu hariyuva nadiyali
Kila kila uliyuva giliyali
CHO: O julu julu hariyuva nadiyali
Kila kila uliyuva giliyali
Preeti maatene....
CHO: Manadase hakkiyagi, mugilage teli teli
Banadaage sutti sulidu, bayalage jeeki jeeki ||
Chilipili haado maina, premadartha gotte ninage
Tudiva midiva jeeva olage
CHO: Tudiva midiva jeeva olage(2)
Tum tum endu haado dumbi preeti reeti gotte ninage
Koogi kareva bhava olage
CHO: Koogi kareva bhava olage (2)
Neelada nelake hasira needi tugado gidamara preeti
Bolada marake chigura tandu olado ele ele preeti
Itta male maleyalli, atta nele neleyalli
Sundara sundara selehandara handara saale
Endu preeti tandaaga
CHO: Manadase hakkiyagi, mugilage teli teli
Banadaage sutti sulidu, bayalage jeeki jeeki
Ho.. julu julu hariyuva nadiyali
Kila kila uliyuva giliyali
CHO: Ho.. nanananana..
Preeti Naatene
Manadase hakkiyagi, mugilage teli teli
Banadaage sutti sulidu, bayalage jeeki jeeki ||
Premi avala kaanade iralu
Preeti novu tande tahudu
Prema roga bande bahudu
CHO: Prema roga bande bahudu
Prema roga bidade baralu
Premi edeya sudade iradu
Suduva edege premave maddu
CHO:Suduva edege premave maddu (2)
Santosha tanda preeti, endu novalle mulugi saagi
Sangati kanda preeti, nitya balalli bendu hogi
Kanna raaga ranginalli, manna anda chendadalli
Chandana chandana siri, chumbana chumbana savi o..
Manadase hakkiyagi, rutumana rangu tugi
Santosha surya minugi, anuraga banu beegi
O kanasali manasali aleyuta novali nalivai kaleyuta
CHO: O kanasali manasali aleyuta novali nalivai kaleyuta
Enu ariye na
Manadase hakkiyagi, rutumana rangu tugi
Santosha surya minugi, anuraaga banu beegi ||
ಚಿತ್ರಗೀತೆ
ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ (೨)
ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ
ಹೋ ಜುಳು ಜುಳು ಹರಿಯುವ ನದಿಯಲಿ
ಕಿಲ ಕಿಲ ಉಲಿಯುವ ಗಿಳಿಯಲಿ
ಮೇಳ: ಓ ಜುಳು ಜುಳು ಹರಿಯುವ ನದಿಯಲಿ
ಕಿಲ ಕಿಲ ಉಲಿಯುವ ಗಿಳಿಯಲಿ
ಪ್ರೀತಿ ಮಾತೇನೆ ....
ಮೇಳ: ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ ।।ಪ।।
ಚಿಲಿಪಿಲಿ ಹಾಡೋ ಮೈನಾ, ಪ್ರೇಮದರ್ಥ ಗೊತ್ತೇ ನಿನಗೆ
ತುಡಿವ ಮಿಡಿವ ಜೀವ ಒಳಗೆ
ಮೇಳ: ತುಡಿವ ಮಿಡಿವ ಜೀವ ಒಳಗೆ (೨)
ತುಂ ತುಂ ಎಂದು ಹಾಡೋ ದುಂಬಿ ಪ್ರೀತಿ ರೀತಿ ಗೊತ್ತೇ ನಿನಗೆ
ಕೂಗಿ ಕರೆವ ಭಾವ ಒಳಗೆ
ಮೇಳ: ಕೂಗಿ ಕರೆವ ಭಾವ ಒಳಗೆ (೨)
ನೀಳಾದ ನೆಲಕೆ ಹಸಿರ ನೀಡಿ ತೂಗಾಡೋ ಗಿಡಮರ ಪ್ರೀತಿ
ಬೋಳಾದ ಮರಕೆ ಚಿಗುರ ತಂದು ಓಲಾಡೋ ಎಲೆ ಎಲೆ ಪ್ರೀತಿ
ಇತ್ತ ಮಲೆ ಮಲೆಯಲ್ಲಿ, ಅತ್ತ ನೆಲೆ ನೆಲೆಯಲ್ಲಿ
ಸುಂದರ ಸುಂದರ ಸೆಲೆ ಹಂದರ ಹಂಡರ ಸಾಲೆ
ಎಂದೂ ಪ್ರೀತಿ ತಂದಾಗ
ಮೇಳ: ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ
ಹೋ ಜುಳು ಜುಳು ಹರಿಯುವ ನದಿಯಲಿ
ಕಿಲ ಕಿಲ ಉಲಿಯುವ ಗಿಳಿಯಲಿ
ಮೇಳ: ಹೋ ನಾ ನಾ ನಾ ನಾ ..
ಪ್ರೀತಿ ನಾತೇನೆ..
ಮನದಾಸೆ ಹಕ್ಕಿಯಾಗಿ, ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು, ಬಯಲಾಗೆ ಜೀಕಿ ಜೀಕಿ ।।೧।।
ಪ್ರೇಮಿ ಅವಳ ಕಾಣದೆ ಇರಲು
ಪ್ರೀತಿ ನೋವು ತಂದೇ ತಹುದು
ಪ್ರೇಮ ರೋಗ ಬಂದೇ ಬಹುದು
ಮೇಳ: ಪ್ರೇಮ ರೋಗ ಬಂದೇ ಬಹುದು
ಪ್ರೇಮ ರೋಗ ಬಿಡದೆ ಬರಲು
ಪ್ರೇಮಿ ಎದೆಯ ಸುಡದೇ ಇರದು
ಸುಡುವ ಎದೆಗೆ ಪ್ರೇಮವೆ ಮದ್ದು
ಮೇಳ: ಸುಡುವ ಎದೆಗೆ ಪ್ರೇಮವೆ ಮದ್ದು (೨)
ಸಂತೋಷ ತಂದ ಪ್ರೀತಿ , ಎಂದೂ ನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ, ನಿತ್ಯ ಬಾಳಲ್ಲಿ ಬೆಂದು ಹೋಗಿ
ಕಣ್ಣ ರಾಗ ರಂಗಿನಲ್ಲಿ, ಮಣ್ಣ ಅಂದ ಚೆಂದದಲ್ಲಿ
ಚಂದನ ಚಂದನ ಸಿರಿ, ಚುಂಬನ ಚುಂಬನ ಸವಿ ಓ ..
ಮನದಾಸೆ ಹಕ್ಕಿಯಾಗಿ, ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ, ಅನುರಾಗ ಬಾನು ಬೀಗಿ
ಓ ಕನಸಲಿ ಮನಸಲಿ ಅಲೆಯುತ ನೋವಲಿ ನಲಿವಲಿ ಕಲೆಯುತ
ಮೇಳ: ಓ ಕನಸಲಿ ಮನಸಲಿ ಅಲೆಯುತ ನೋವಲಿ ನಲಿವಲಿ ಕಲೆಯುತ
ಏನೂ ಅರಿಯೆ ನಾ
ಮನದಾಸೆ ಹಕ್ಕಿಯಾಗಿ, ಋತುಮಾನ ರಂಗು ತೂಗಿ
ಸಂತೋಷ ಸೂರ್ಯ ಮಿನುಗಿ, ಅನುರಾಗ ಬಾನು ಬೀಗಿ ।।೨।।
No comments:
Post a Comment