Bhavageete
Sahitya: G S Shivarudrappa
Songlink: Click Here
Prakrutiyante kaviya manasu
Vipula roopa dharini
Brahmanedeya kanasinate (2)
Koti kalpa gamini ||
Kadalinante kaviya manasu
Ratna garbha raagini
Yuga yugagala nashwarake (2)
Amruta kavacha daayini ||
Baninante kaviya manasu
Bhava megha charini
Benda bhuviya hasurinedege (2)
Ruchira varsha roopini ||
ಭಾವಗೀತೆ
ಪ್ರಕೃತಿಯಂತೆ ಕವಿಯ ಮನಸು
ವಿಪುಲ ರೂಪ ಧಾರಿಣಿ
ಬ್ರಹ್ಮನೆದೆಯ ಕನಸಿನಂತೆ (೨)
ಕೋಟಿ ಕಲ್ಪಗಾಮಿನಿ ।।ಪ।।
ಕಡಲಿನಂತೆ ಕವಿಯ ಮನಸು
ರತ್ನ ಗರ್ಭ ರಾಗಿಣೀ
ಯುಗ ಯುಗಗಳ ನಶ್ವರಕೆ (೨)
ಅಮೃತ ಕವಚ ದಾಯಿನೀ ।।೧।।
ಬಾನಿನಂತೆ ಕವಿಯ ಮನಸು
ಭಾವ ಮೇಘ ಚಾರಿಣೀ
ಬೆಂದ ಭುವಿಯ ಹಸುರಿನೆದೆಗೆ
ರುಚಿರ ವರ್ಷ ರೂಪಿಣಿ ।।೨।।

No comments:
Post a Comment