Tuesday, September 19, 2023

Ganesha Ninna Mahime Apaara (ಗಣೇಶ ನಿನ್ನ ಮಹಿಮೆ ಅಪಾರ)

Bhaktigeete

Sahitya: R N Jayagopal

Singer: SPB

Song link: Click Here


Ganesha ninna mahime apaara, ganesha ninna shakti apaara

Bhaktavatsala karunasaagara rakshisu rakshisu vighneshwara ||


Jaya ganesha jaya ganesha jaya ganesha rakshisu

Jayada haadiyali endu namma neenu nadesu ||


Andhahkaaravannu surya nasha maaduvante

Nee vighnagalannu nasha maadi neegu namma chinteya

Kastagalanu nungi bega sukhada daari torisu

Nova neegi balinalli nemmadiyanu karunisu ||


Kangalalli swami ninna divya murthy tumbali

Kivigalalli dinavu ninna keerti tumbi hariyali

Nmma manavu sada ninna dhyanadalli mulugali

Ninna karuneyinda tande namma baalu belagali ||

Jaya ganesha.. jaya jaya jaya ganesha (2)..



ಭಕ್ತಿಗೀತೆ 


ಗಣೇಶ ನಿನ್ನ ಮಹಿಮೆ ಅಪಾರ, ಗಣೇಶ ನಿನ್ನ ಶಕ್ತಿ ಅಪಾರ 

ಭಕ್ತವತ್ಸಲಾ ಕರುಣಾಸಾಗರ ರಕ್ಷಿಸು ರಕ್ಷಿಸು ವಿಘ್ನೇಶ್ವರ ।।


ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಿಸು 

ಜಯದ ಹಾದಿಯಲಿ ಎಂದೂ ನಮ್ಮ ನೀನು ನಡೆಸು ।।ಪ।।


ಅಂಧಃಕಾರವನ್ನು ಸೂರ್ಯ ನಾಶ ಮಾಡುವಂತೆ 

ನೀ ವಿಘ್ನಗಳನ್ನು ನಾಶ ಮಾಡಿ ನೀಗು ನಮ್ಮ ಚಿಂತೆಯ 

ಕಷ್ಟಗಳನು ನುಂಗಿ ಬೇಗ ಸುಖದ ದಾರಿ ತೋರಿಸು 

ನೋವ ನೀಗಿ ಬಾಳಿನಲ್ಲಿ ನೆಮ್ಮದಿಯನು ಕರುಣಿಸು ।।೧।।


ಕಂಗಳಲ್ಲಿ ಸ್ವಾಮಿ ನಿನ್ನ ದಿವ್ಯ ಮೂರ್ತಿ ತುಂಬಲಿ 

ಕಿವಿಗಳಲ್ಲಿ ದಿನವೂ ನಿನ್ನ ಕೀರ್ತಿ ತುಂಬಿ ಹರಿಯಲಿ 

ನಮ್ಮ ಮನವು ಸದಾ ನಿನ್ನ ಧ್ಯಾನದಲ್ಲಿ ಮುಳುಗಲಿ 

ನಿನ್ನ ಕರುಣೆಯಿಂದ ತಂದೆ ನಮ್ಮ ಬಾಳು ಬೆಳಗಲಿ ।।೨।।

ಜಯ ಗೆಣೇಶ.. ಜಯ ಜಯ ಜಯ ಗಣೇಶ (೨).. 



No comments:

Post a Comment