Bhaktigeete
Sahitya: Chi Udayshankar
Singer: Dr Rajkumar
Song link: Click Here
Gajamukhane goureesutane shanmukha sodarane
Rajata girigodeyana kumarane vijaya vinayakane |
Vijaya vinayakane (2) gajamukhane, karuna sagarane
Harihara brahmmaru anavarata bhajisuva
Moojagadodeya ganeshane ||
Neene modalu ninninde taane aarambha jagadallella
Modala pooje ninagada mele innulida poojeyella
Neenu harasidare yava karyadalu vighnavembudilla ||
Sulabha poojege karuneyinda nee bega olidu baruve
Hullugarikeya hoovinante swekarisi varava koduve
Premadinda nenedavara manadi stiravagi endu iruve ||
ಭಕ್ತಿಗೀತೆ
ಗಜಮುಖನೆ ಗೌರೀಸುತನೇ ಷಣ್ಮುಖ ಸೋದರನೇ
ರಜತ ಗಿರಿಗೊಡೆಯನ ಕುಮಾರನೇ ವಿಜಯ ವಿನಾಯಕನೇ ।
ವಿಜಯ ವಿನಾಯಕನೇ (೨) ಗಜಮುಖನೆ, ಕರುಣಾ ಸಾಗರನೇ
ಹರಿಹರ ಬ್ರಹ್ಮರು ಅನವರತ ಭಜಿಸುವ ಮೂಜಗದೊಡೆಯ ಗಣೇಶನೇ ।।
ನೀನೇ ಮೊದಲು ನಿನ್ನಿಂದೆ ತಾನೆ ಆರಂಭ ಜಗದಲ್ಲೆಲ್ಲ
ಮೊದಲ ಪೂಜೆ ನಿನಗಾದ ಮೇಲೆ ಇನ್ನುಳಿದ ಪೂಜೆಯಲ್ಲಾ
ನೀನು ಹರಸಿದರೆ ಯಾವ ಕಾರ್ಯದಲು ವಿಘ್ನವೆಂಬುದಿಲ್ಲ ।।೧।।
ಸುಲಭ ಪೂಜೆಗೆ ಕರುಣೆಯಿಂದ ನೀ ಬೇಗ ಒಲಿದು ಬರುವೆ
ಹುಲ್ಲುಗರಿಕೆಯ ಹೂವಿನಂತೆ ಸ್ವೀಕರಿಸಿ ವರವ ಕೊಡುವೆ
ಪ್ರೇಮದಿಂದ ನೆನೆದವರ ಮನದಿ ಸ್ಥಿರವಾಗಿ ಎಂದೂ ಇರುವೆ
।।೨।।

No comments:
Post a Comment