Monday, September 11, 2023

Idu Gokarnada Purana Kathana (ಇದು ಗೋಕರ್ಣದ ಪುರಾಣ ಕಥನ)

Bhaktigeete

Singer: P B Srinivas, B K Sumitra

Song link: Click Here


Idu gokarnada purana kathana, aalise jeevana pavana

Mahabaleshwara nelesida naadina apoorva chariteyu amruta samaana ||


Ravaneshwaranu maateya poojege atmalingavanu taralendu

Kailasadadiyalli kulitu prarthisida parama dayalu pareshana

Om namah shivaya

Om namah shivaya

Om namah shivaya

Om namah shivaya

Chandrashekhara chandrashekhara chandrashekhara  

pahimam

Chandrashekhara chandrashekhara chandrashekhara   rakshamam


Sakala vedavida bhaktagresara ravana stutisida shivanannu

Bhaktara bhaktanu sarvashaktana parashivanolidanu kshanadalli

Lokaikanatha udatta charitanu needida varavanu ravanage

Atmalingavane bedida bhaktana korike phalisida mudadinda

Pralayave ghatisuvudennuta bhayadali surakula tattaragollutire

Narada needida salaheya keli ganapati odida bhutalake

Sanje sameepisi aarghya needalu ravana kataragondiralu

Lingava dhareyali irisadantaha dharma sankatavu kaadiralu

Samayake odagida brahmachari aa ganapati ravananeduralli

Ayya, vatuve, ee lingava hididiru ennuta bedida ravananu

Mooru saari ta kareyuvudendu baradire lingavu dharepaalendu

Ganapati aruhida kattaleya, ravana tugida taleya

Aarghyava kodutiha samayava nodi ganapati karedanu ravanana

Baralarade ravana midukidanu.. lingavu dhareyanu seritu

Odi bandu vatu maadida karyake

Rosha veshadi kuttidanu

Ravaneshwaranu ganapati shiravanu mustiyinda ta 

guddidanu

Ganapati maadida ghanakaryavanu lokavella kondaditu

Devalokave hoomalegareyitu

Harushada honale hariyitu

Bhagnamanorathanagi ravananu bhugata lingavanettutire

Sotu bisutanu desedeseyalli vastra samputava daaravanu

Udbhavisitu odanodaneye alli adbhuta lingagalaidu

Sajjeshwara, gunavantheshwara, murudeshwara dharaeshwara, mahabaleshwara ||


ಭಕ್ತಿಗೀತೆ 


ಇದು ಗೋಕರ್ಣದ  ಪುರಾಣ ಕಥನ, ಆಲಿಸೆ  ಜೀವನ ಪಾವನ 

ಮಹಾಬಲೇಶ್ವರ ನೆಲೆಸಿದ ನಾಡಿನ ಅಪೂರ್ವ ಚರಿತೆಯು  ಅಮೃತ ಸಮಾನ ।।


ರಾವಣೇಶ್ವರನು ಮಾತೆಯ ಪೂಜೆಗೆ ಆತ್ಮಲಿಂಗವನು  ತರಲೆಂದು 

ಕೈಲಾಸದಡಿಯಲ್ಲಿ ಕುಳಿತು ಪ್ರಾರ್ಥಿಸಿದ ಪರಮ ದಯಾಳು ಪರೇಶನ  

ಓಂ ನಮಃ ಶಿವಾಯ 

ಓಂ ನಮಃ ಶಿವಾಯ 

ಓಂ ನಮಃ ಶಿವಾಯ 

ಓಂ ನಮಃ ಶಿವಾಯ

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ 

ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಂ 


ಸಕಲ ವೇದವಿದ ಭಕ್ತಾಗ್ರೇಸರ ರಾವಣ ಸ್ತುತಿಸಿದ ಶಿವನನ್ನು 

ಭಕ್ತರ ಭಕ್ತನು  ಸರ್ವಶಕ್ತನಾ ಪರಶಿವನೊಲಿದನು  ಕ್ಷಣದಲ್ಲಿ 

ಲೋಕೈಕನಾಥ ಉದಾತ್ತ ಚರಿತನು ನೀಡಿದ ವರವನು ರಾವಣಗೆ 

ಆತ್ಮಲಿಂಗವನೆ ಬೇಡಿದ ಭಕ್ತನ ಕೋರಿಕೆ ಫಲಿಸಿದ ಮುದದಿಂದ 

ಪ್ರಳಯವೆ ಘಟಿಸುವುದೆನ್ನುತ  ಭಯದಲಿ  ಸುರಕುಲ ತತ್ತರಗೊಳ್ಳುತಿರೆ 

ನಾರದ ನೀಡಿದ ಸಲಹೆಯ ಕೇಳಿ ಗಣಪತಿ ಓಡಿದ ಭೂತಳಕೆ 

ಸಂಜೆ ಸಮೀಪಿಸಿ ಆರ್ಘ್ಯ ನೀಡಲು ರಾವಣ ಕಾತರಗೊಂಡಿರಲು 

ಲಿಂಗವ ಧರೆಯಲಿ  ಇರಿಸದಂತಹ ಧರ್ಮಸಂಕಟವು ಕಾಡಿರಲು 

ಸಮಯಕೆ ಒದಗಿದ ಬ್ರಹ್ಮಚಾರಿ ಆ ಗಣಪತಿ ರಾವಣನೆದುರಲ್ಲಿ 

ಅಯ್ಯ, ವಟುವೆ, ಈ ಲಿಂಗವ ಹಿಡಿದಿರು ಎನ್ನುತ ಬೇಡಿದ ರಾವಣನು 

ಮೂರು ಸಾರಿ ತಾ ಕರೆಯುವುದೆಂದು ಬರದಿರೆ ಲಿಂಗವು ಧರೆಪಾಲೆಂದು 

ಗಣಪತಿ ಅರುಹಿದ ಕಟ್ಟಳೆಯ, ರಾವಣ ತೂಗಿದ ತಲೆಯ 

ಆರ್ಘ್ಯವ   ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು  ರಾವಣನ 

ಬರಲಾರದೆ ರಾವಣ ಮಿಡುಕಿದನು..  ಲಿಂಗವು ಧರೆಯನು ಸೇರಿತು 

ಓಡಿ ಬಂದು ವಟು ಮಾಡಿದ ಕಾರ್ಯಕೆ 

ರೋಷಾ ವೇಷದಿ ಕುಟ್ಟಿದನು 

ರಾವಣೇಶ್ವರನು ಗಣಪತಿ ಶಿರವನು ಮುಷ್ಠಿಯಿಂದಾ ತಾ  ಗುದ್ದಿದನು 

ಗಣಪತಿ ಮಾಡಿದ ಘನಕಾರ್ಯವನು ಲೋಕವೆಲ್ಲ ಕೊಂಡಾಡಿತು 

ದೇವಲೋಕವೇ ಹೂಮಳೆಗರೆಯಿತು 

ಹರುಷದ ಹೊನಲೇ ಹರಿಯಿತು 

ಭಗ್ನಮನೋರಥನಾಗಿ ರಾವಣನು ಭೂಗತ ಲಿಂಗವನೆತ್ತುತ್ತಿರೆ 

ಸೋತು ಬಿಸುಟನು ದೆಸೆದೆಸೆಯಲ್ಲಿ ವಸ್ತ್ರ ಸಂಪುಟವ  ದಾರವನು 

ಉದ್ಭವಿಸಿತು ಒಡನೊಡನೆಯೇ ಅಲ್ಲಿ ಅದ್ಭುತ ಲಿಂಗಗಳೈದು 

ಸಜ್ಜೇಶ್ವರ, ಗುಣವಂತೇಶ್ವರ, ಮುರುಡೇಶ್ವರ,ಧಾರೇಶ್ವರ, ಮಹಾಬಲೇಶ್ವರ ।।

                                   





No comments:

Post a Comment