Bhavageete
Sahitya: K S Nissar Ahmed
Song link: Click Here
Nanna nalavina balli maidumbi nalivaga
Lokave, heeradiru dumbiyolu hoova;
Balina kastagala balu ghora payanadali
Chanadonde kanasiduve, berasadiru nova ||
Savi sukhadee galige bandu mellane balige
Pallavisutide edeya chaitradante;
Indu naa mai maretu oleyuve soga beretu,
Aasegala chivutadiru hakkiyante ||
Aagasake esediruva kallinanteruvenu,
Gaaliyali teluvenu - gandhadante;
Matte beeluvenille, chintegala kesaralle -
Bittubidu eegenna muktanante ||
ಭಾವಗೀತೆ
ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರಸದಿರು ನೋವ ।।
ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ ।।
ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ-
ಬಿಟ್ಟುಬಿಡು ಈಗೆನ್ನ ಮುಕ್ತನಂತೆ ।।

No comments:
Post a Comment