Saturday, September 16, 2023

Indu Kendavareya (ಇಂದು ಕೆಂದಾವರೆಯ)

Bhavageete

Sahitya: Gopalakrishna Adiga

Singer: Manjula Gururaj

song link: Click Here


Indu kendavareya daladalisi daariyali

Gandhadoutana hogi baruva janake

Manda maarutanirali mari dumbi irali

Aanandavire atithigala kareyabeke

Indu kendavareya daladalisi daariyali ||


Nagutalide neeru, hombisilu, kachaguli idalu

Dumbigalu, olavane, ganjisiralu

Nachi tale baagisitu kamala

Doorada, bana daariyali, saptashwaveri bahanu

Indu kendavareya daladalisi daariyali ||


Tanna kai kaiyolu, olavu balegalannittu

Neerinaaladolavanu, bimbisuvanu

Maimaretuda padma, paramegala parivara

Manjagi karagittu, sutta muttaa

Indu kendavareya daladalisi daariyali ||


Iruva dumbiya bittu, baruva nesara karege

Ogottudo nanna, kendavare

Baruva baalina kanasu, raviyagi bahudenu (2)

Kaayabeku adake, ellivarege

Indu kendavareya daladalisi daariyali

Gandhadoutana hogi baruva janake (3) ||


ಭಾವಗೀತೆ 


ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ 

ಗಂಧದೌತಣ ಹೋಗಿ ಬರುವ ಜನಕೆ 

ಮಂದ ಮಾರುತನಿರಲಿ, ಮರಿ ದುಂಬಿ ಇರಲಿ 

ಆನಂದವಿರೆ, ಅತಿಥಿಗಳ ಕರೆಯಬೇಕೇ 

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ ।।


ನಗುತಲಿದೆ ನೀರು, ಹೊಂಬಿಸಿಲು, ಕಚಗುಳಿ ಇಡಲು 

ದುಂಬಿಗಳು, ಒಲವನೇ, ಗುಂಜಿಸಿರಲೂ 

ನಾಚಿ ತಲೆ ಬಾಗಿಸಿತು ಕಮಲ 

ದೂರದ, ಬಾನ ದಾರಿಯಲಿ, ಸಪ್ತಾಶ್ವವೇರಿ ಬಹನು 

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ ।।


ತನ್ನ ಕೈ ಕೈಯೊಳು, ಒಲವು ಬಲೆಗಳನ್ನಿಟ್ಟು 

ನೀರಿನಾಳದೊಳವನೊ, ಬಿಂಬಿಸುವನು 

ಮೈಮರೆತುದಾ ಪದ್ಮಾ, ಪರಮೆಗಳ ಪರಿವಾರ 

ಮಂಜಾಗಿ ಕರಗಿತ್ತು, ಸುತ್ತ ಮುತ್ತಾ 

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ ।।


ಇರುವ ದುಂಬಿಯ ಬಿಟ್ಟು, ಬರುವ ನೇಸರ ಕರೆಗೆ 

ಒಗೊಟ್ಟುದೋ ನನ್ನ, ಕೆಂದಾವರೆ 

ಬರುವ ಬಾಳಿನ ಕನಸು, ರವಿಯಾಗಿ ಬಹುದೇನು (೨)

ಕಾಯಬೇಕು ಅದಕೆ, ಎಲ್ಲಿವರೆಗೆ 

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ 

ಗಂಧದೌತಣ ಹೋಗಿ ಬರುವ ಜನಕೆ (೩) ।।





No comments:

Post a Comment