Bhaktigeete
Sri Purandara Dasara Keerthanegalu
Song link: Click Here
Raga: Saranga
Tala: Atatala
Nanenu madideno krishnayya
Neenenna salahabeku ||
Kariraja karesidane
Droupadidevi baredole kaluhidale
Harushadindali rushi patniya shapava
Pariharisideyallo he swami ||
Rakkasa tanujanalle
Prahllada chikka prahlada dhruvanu
Sikkida paapa madida ajamila
Ninnakkare magane pelo he swami ||
Oppidi avalakkiya krishnayya
Ninagoppisidavanigolide
Oppenu ninage purandara vittalava
Rappante kayabeko he swami ||
ಭಕ್ತಿಗೀತೆ
ನಾನೇನು ಮಾಡಿದೆನೋ ಕೃಷ್ಣಯ್ಯ
ನೀನೆನ್ನ ಸಲಹಬೇಕು ।।ಪ।।
ಕರಿರಾಜ ಕರೆಸಿದನೆ
ದ್ರೌಪದಿ ದೇವಿ ಬರೆದೋಲೆ ಕಳುಹಿದಳೆ
ಹರುಷದಿಂದಲಿ ಋಷಿ ಪತ್ನಿಯ ಶಾಪವ
ಪರಿಹರಿಸಿದೆಯಲ್ಲೋ ಹೇ ಸ್ವಾಮಿ ।।೧।।
ರಕ್ಕಸ ತನುಜನಲ್ಲೆ
ಪ್ರಹ್ಲಾದ ಚಿಕ್ಕ ಪ್ರಾಯದ ಧ್ರುವನು
ಸಿಕ್ಕಿದ ಪಾಪ ಮಾಡಿದ ಅಜಾಮಿಳ
ನಿನ್ನಕ್ಕರೆ ಮಗನೆ ಪೇಳೋ ಹೇ ಸ್ವಾಮಿ ।।೨।।
ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ
ನಿನಗೊಪ್ಪಿಸಿದವನಿಗೊಲಿದೆ
ಒಪ್ಪೆನು ನಿನಗೆ ಶ್ರೀ ಪುರಂದರ ವಿಠ್ಠಲವ
ರಪ್ಪಂತೆ ಕಾಯಬೇಕೊ ಹೇ ಸ್ವಾಮಿ ।।೩।। ಶ್ರೀ

No comments:
Post a Comment