Bhavageete
Sahitya: Doddarangegowda
Singer: SPB
Song link: Click Here
Yaariguntu yaarigilla? balella bevu bella! (2)
Bandadella neesabekayya geneya
Kanadakke chinte yakayya?
Gonu haaki kudabeda, gattinage bala noda (2)
Yaariguntu yaarigilla? balella bevu bella! ||
Elu beelu iruvudene, illi hutti banda mele
Sukha dukha kaadodene, uppu khara tinda mele; (2)
Kasta metti sagabekayya o! geneya (2)
Kaiya chelli koragabedayya
Gonu haaki kudabeda, gattinage bala noda (2)
Yaariguntu yaarigilla? balella bevu bella! ||
Preeti prema nadeda vele, tappodilla rasa leele
Kaddu mucchi nadeyo vele, manasinalli tuguyyale;
Olage horage yake bekayya o! geneya
Kannu teredu loka nodayya
Gonu haaki kudabeda, gattinage bala noda (2)
Yaariguntu yaarigilla? balella bevu bella! ||
ಭಾವಗೀತೆ
ಯಾರಿಗುಂಟು ಯಾರಿಗಿಲ್ಲ? ಬಾಳೆಲ್ಲ ಬೇವು ಬೆಲ್ಲ! (೨)
ಬಂದದೆಲ್ಲ ನೀಸಬೇಕಯ್ಯಾ ಗೆಣೆಯಾ
ಕಾಣದಕ್ಕೆ ಚಿಂತೆ ಯಾಕಯ್ಯಾ ?
ಗೋಣು ಹಾಕಿ ಕೊಡಬೇಡ, ಗತ್ತಿನಾಗೆ ಬಾಳ ನೋಡ (೨)
ಯಾರಿಗುಂಟು ಯಾರಿಗಿಲ್ಲ? ಬಾಳೆಲ್ಲ ಬೇವು ಬೆಲ್ಲ! ।।ಪ।।
ಏಳು ಬೀಳು ಇರುವುದೇನೆ, ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ, ಉಪ್ಪು ಖಾರ ತಿಂದ ಮೇಲೆ; (೨)
ಕಷ್ಟ ಮೆಟ್ಟಿ ಸಾಗಬೇಕಯ್ಯಾ ಓ! ಗೆಣೆಯಾ (೨)
ಕೈಯ ಚೆಲ್ಲಿ ಕೊರಗಬೇಡಯ್ಯ
ಗೋಣು ಹಾಕಿ ಕೊಡಬೇಡ, ಗತ್ತಿನಾಗೆ ಬಾಳ ನೋಡ (೨)
ಯಾರಿಗುಂಟು ಯಾರಿಗಿಲ್ಲ? ಬಾಳೆಲ್ಲ ಬೇವು ಬೆಲ್ಲ!।।೧।।
ಪ್ರೀತಿ ಪ್ರೇಮ ನಡೆದ ಮೇಲೆ, ತಪ್ಪೋದಿಲ್ಲ ರಾಸ ಲೀಲೆ
ಕದ್ದು ಮುಚ್ಚಿ ನಡೆಯೊ ವೇಳೆ, ಮನಸಿನಲ್ಲಿ ತೂಗುಯ್ಯಾಲೆ; (೨)
ಒಳಗೆ ಹೊರಗೆ ಯಾಕೆ ಬೇಕಯ್ಯಾ ಓ! ಗೆಣೆಯಾ (೨)
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೊಡಬೇಡ, ಗತ್ತಿನಾಗೆ ಬಾಳ ನೋಡ (೨)
ಯಾರಿಗುಂಟು ಯಾರಿಗಿಲ್ಲ? ಬಾಳೆಲ್ಲ ಬೇವು ಬೆಲ್ಲ!।।೨।।

No comments:
Post a Comment