Bhavageete
Sahitya: Doddarangegowda
Song link: Click Here
Moodutta ravi rangu tandaite
Odutta nadi haadu needaite
Bettada myage
Katteya myage
Gaali teedaite ||
Bellakki salu teli teli pallakki tugaite
Mallige tota minchi minchi bellage holedaite
Kadina jadu
Kampu-impu
Ottige kudaite ||
Hakkiya mela koogi koogi hattira karedaite
Kunkuma dhuli melakkeri sindhoora ittaite
Kannare kanda
Notadoota
santosha savidaite! ||
ಭಾವಗೀತೆ
ಮೂಡುತ್ತ ರವಿ ರಂಗು ತಂದೈತೆ
ಓಡುತ್ತಾ ನದಿ ಹಾಡು ನೀಡೈತೆ
ಬೆಟ್ಟದ ಮ್ಯಾಗೆ
ಕಟ್ಟೆಯ ಮ್ಯಾಗೆ
ಗಾಳಿ ತೀಡೈತೆ ।।ಪ।।
ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು
ಕಂಪು-ಇಂಪು
ಒಟ್ಟಿಗೆ ಕೂಡೈತೆ ।।೧।।
ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ
ನೋಟದೂಟ
ಸಂತೋಷ ಸವಿದೈತೆ ! ।।೨।।

No comments:
Post a Comment