Movie: Hombisilu (1979)
Singer: SPB
Song link: Click Here
Neera bittu neleda mele doni sagadu
Nelava bittu neera mele bandi hogadu
Ninna bittu nanna, nanna bittu ninna
Jeevana sagadu, jeevana sagadu ||
Surya barade kamalavendu araladu
Chandranirade taare endu naliyadu
Olavu moodadiralu manavu araladu
Manavu araladiralu geluvu kaanadu (2) ||
Lokadalli gandu hennigasare
Aadarilli nanu ninna kaisere
Koodi naliva aase manadi kaadire
Hitavu elli navu bere aadare (2) ||
Neera bittu neleda mele doni sagadu
Nelava bittu neera mele bandi hogadu
Ninna bittu nanna, nanna bittu ninna
Jeevana sagadu, Pavana aagadu ||
ಚಿತ್ರಗೀತೆ
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನಾ ಸಾಗದು, ಜೀವನಾ ಸಾಗದು ।।ಪ।।
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದೂ
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು (೨) ।।೧।।
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈ ಸೆರೆ
ಕೂಡಿ ನಲಿವ ಆಸೆ ಮನದಿ ಕಾದಿರೆ
ಹಿತವು ಎಲ್ಲಿ ನಾವು ಬೇರೆ ಆದರೆ (೨) ।।೨।।
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನಾ ಸಾಗದು, ಪಾವನಾ ಆಗದು ।।

No comments:
Post a Comment