Wednesday, July 19, 2023

Subbabhattara Magale (ಸುಬ್ಬಭಟ್ಟರ ಮಗಳೇ)

Bhavageete

Sahitya: B R Lakshmana Rao

Singer: C Ashwath

Song link: Click Here


Subbabhattara magale, idella nande tagolle (4)


Neeli naileksina megha vinyasada aakashada seere

Digantagale mere

Munjavina bangarada betta beladingala belli

Nina bhagyake ene elli

Subbabhattara magale, idella nande tagolle (2)


Ratri tereyuvudu ado nannade

Jigi jigi odave dukaanu, aarisiko bekenu

Chikke mugutige chandr padakakke nihaarike haara

Nanna sampattestu aapara 

Subbabhattara magale, idella nande tagolle (2)


Nasukali hittala hullina mele, rashi rashi muttu, innu ninna swattu

Sugandha teeduva vasanta pavana, sapta varnada kamaanu, ninage pouru

Subbabhattara magale, idella nande tagolle (2)


Pataragittiya pakkavaneri hoopada kalige haari

Prayada madhu heeri

Julu julu hariyuva kalada holeyali

Teluva mulu mulugi, nina hosatanadali belagi

Subbabhattara magale, idella nande tagolle (2)


ಭಾವಗೀತೆ 


ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೪)


ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ ಆಕಾಶದ ಸೀರೆ 

ದಿಗಂತಗಳೇ ಮೇರೆ 

ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ 

ನಿನ ಭಾಗ್ಯಕೆ ಎಣೆ ಎಲ್ಲಿ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ(೨)


ರಾತ್ರಿ ತೆರೆಯುವುದು ಅದೋ ನನ್ನದೆ 

ಜಿಗಿ ಜಿಗಿ ಒಡವೆ ದುಕಾನು, ಆರಿಸಿಕೋ ಬೇಕೇನು 

ಚಕ್ಕೆ ಮೂಗುತಿಗೆ ಚಂದ್ರ ಪದಕಕ್ಕೆ ನೀಹಾರಿಕೆ ಹಾರ 

ನನ್ನ ಸಂಪತ್ತೆಷ್ಟು ಅಪಾರ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೨)


ನಸುಕಲಿ ಹಿತ್ತಲ ಹುಲ್ಲಿನ ಮೇಲೆ, ರಾಶಿ ರಾಶಿ ಮುತ್ತು, ಇನ್ನು ನಿನ್ನ ಸ್ವತ್ತು 

ಸುಗಂಧ ತೀಡುವ ವಸಂತ ಪವನ, ಸಪ್ತ ವರ್ಣದ ಕಮಾನು, ನಿನಗೆ ಪೌರು 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ(೨)


ಪತರಗಿತ್ತಿಯ ಪಕ್ಕವನೇರಿ ಹೂಪಡ ಕಾಲಿಗೆ ಹಾರಿ 

ಪ್ರಾಯದ ಮಧು ಹೀರಿ 

ಜುಳು ಜುಳು ಹರಿಯುವ ಕಾಲದ ಹೊಳೆಯಲಿ 

ತೇಲುವ ಮುಳುಮುಳುಗಿ, ನಿನ ಹೊಸತನದಲಿ ಬೆಳಗಿ 

ಸುಬ್ಬಭಟ್ಟರ ಮಗಳೇ, ಇದೆಲ್ಲ ನಂದೆ ತಗೊಳ್ಳೆ (೨)



No comments:

Post a Comment