Movie: Shubhamangala (1975)
Singer: SPB
Song link: Click Here
Snehada kadalalli.... nenapina doniyali.....(2)
Payaniga nanamma, payaniga nanamma
Preetiya teerava seruvudonde (2)
Baalina guriyamma, baalina guriyamma ||
Balyada aata, aa hudugata, innu maasilla, ha.. ha (2)
Aatade sotu, roshade kacchida (2)
Gayava maretilla, hahaha.. gayava maretilla ||
Shalege chakkar, utake haajar, lekkade bari sonne (2)
Ennuta nanu, kenakalu ninna (2)
Oodiside kenne, ho.. naanada mareyuvene ||
Sangava bittu jagala aadida dinava maretilla ha.. ha.. (2)
Maleyali nanna morige tallida (2)
Tuntiya maretilla, ha..ha.., tuntiya maretilla ||
ಚಿತ್ರಗೀತೆ
ಸ್ನೇಹದ ಕಡಲಲ್ಲಿ .... ನೆನಪಿನ ದೋಣಿಯಲೀ ... (೨)
ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ
ಪ್ರೀತಿಯ ತೀರವ, ಸೇರುವುದೊಂದೆ (೨)
ಬಾಳಿನ ಗುರಿಯಮ್ಮಾ, ಬಾಳಿನ ಗುರಿಯಮ್ಮಾ।।ಪ।।
ಬಾಲ್ಯದ ಆಟ, ಆ ಹುಡುಗಾಟ, ಇನ್ನೂ ಮಾಸಿಲ್ಲ, ಹಾ .. ಹಾ (೨)
ಆಟದೆ ಸೋತು, ರೋಷದೆ ಕಚ್ಚಿದ (೨)
ಗಾಯವ ಮರೆತಿಲ್ಲ, ಹ್ಹಹ್ಹಹ್ಹ, ಗಾಯವ ಮರೆತಿಲ್ಲ।।೧।।
ಶಾಲೆಗೆ ಚಕ್ಕರ್, ಊಟಕೆ ಹಾಜರ್, ಲೆಕ್ಕದೆ ಬರಿ ಸೊನ್ನೆ (೨)
ಎನ್ನುತ ನಾನು, ಕೆಣಕಲು ನಿನ್ನ (೨)
ಉದಿಸಿದೆ ಕೆನ್ನೆ, ಹೋ, ನಾನದ ಮರೆಯುವೆನೇ ।।೨।।
ಸಂಗವ ಬಿಟ್ಟು ಜಗಳ ಆಡಿದ ದಿನವ ಮರೆತಿಲ್ಲ ಹಾ .. ಹಾ (೨)
ಮಳೆಯಲಿ ನನ್ನಾ ಮೋರಿಗೆ ತಳ್ಳಿದ (೨)
ತುಂಟಿಯ ಮರೆತಿಲ್ಲ, ಹ್ಹಹ್ಹ, ತುಂಟಿಯ ಮರೆತಿಲ್ಲ।।೩।।

No comments:
Post a Comment