Movie: Bangarada Hoovu(1967)
Singer: P Susheela
Song link: Click Here
Nee nadeva haadiyalli, nage hoovu baadadirali
Ee bala buttiyali sihi palu ninagirali
Kahi ella nanagirali ||
Sahane meeri kanada kaiyyi, maaditenu muyyige muyyi
Yaru idake honeye illa, irali nanage nindaneyella
Vidhiyu hoodi ola sanchannu, odeyitenna honganasannu
Noova nungi baluve nanu, sukhavu ninna kaaditenu
Ee bege neegali, manasu haguravagali ||
Eneno bayasitu manasu, kai sere ella sogasu
Kai jare ella kanasu, aase maretare lesu
Nanna kanna neerinalli ninna bimba kanutirali
Ee balu ninte irali ninna nenapu chiravagirali
Ee bege neegali, manasu haguravagali ||
ಚಿತ್ರಗೀತೆ
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲೀ
ಕಹಿ ಎಲ್ಲ ನನಗಿರಲೀ ।।ಪ।।
ಸಹನೆ ಮೀರಿ ಕಾಣದ ಕೈಯ್ಯಿ, ಮಾಡಿತೇನು ಮುಯ್ಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ, ಇರಲಿ ನನಗೆ ನಿಂದನೆಯೆಲ್ಲಾ
ವಿಧಿಯು ಹೂಡಿ ಒಳ ಸಂಚನ್ನು, ಒಡೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು, ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ, ಮನಸು ಹಗುರವಾಗಲಿ ।।೧।।
ಏನೇನೋ ಬಯಸಿತು ಮನಸು, ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು, ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ, ನಿನ್ನ ಬಿಂಬ ಕಾಣುತಿರಲಿ
ಈ ಬಾಳು ನಿಂತೇ ಇರಲಿ, ನಿನ್ನ ನೆನಪು ಚಿರವಾಗಿರಲಿ
ಈ ಬೇಗೆ ನೀಗಲಿ, ಮನಸು ಹಗುರವಾಗಲಿ ।।೨।।

No comments:
Post a Comment