Movie: Karulina kare (1970)
Singer: S Janaki, B K Sumitra
Song link: Click Here
A.... Aa.... A.... Aa.... E.... Ee.... E.... Ee....
A aa e ee kannadada akshara male
A.. amma embude kandana karulina kareyole (2) ||Pallavi||
Aa- aata uuta ota kannada ondane pata
Kannada bhasheya kalitavage jeevanave rasaduta ||Repeat Pallavi||
E.... E.....
Iddavarella illadavarige needalebeku
Ee.. eshwaranalli endu nambike idabeku ||Repeat Pallavi||
U.... uppu tinda manege eradu bageyabeda
Uu.... Uurige droha madi badukalenisabeda ||
Ru.... Ruu.... Eae.... Eaae.... I....
Bharata matege jai
O....
Onde tayi makkalu navu ondugudabeku (2)
Oo....
Odanu kalitu deshada sevege nilabeku ||Repeat Pallavi||
Ou.... Am.... Aha.... Ou.... Am.... Aha.... Aha.... Aha ha ha...
ಚಿತ್ರಗೀತೆ
ಅ .. ಆ .. ಅ .. ಆ .. ಇ .. ಈ .. ಇ .. ಈ ..
ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅ.. ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ (೨) ।।ಪ।।
ಆ ಆಟ ಊಟ ಓಟ ಕನ್ನಡ ಒಂದನೆ ಪಾಠ
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ
ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅ.. ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।
ಇ .. ಇ..
ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು
ಈ .. ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು
ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅ.. ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।
ಉ.. ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ
ಊ.. ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ
ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅ.. ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।
ಋ ೠ ಎ ಏ ಐ ಭಾರತ ಮಾತೆಗೆ ಜೈ
ಓ..
ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು (೨)
ಓ.. ಓದನು ಕಲಿತು ದೇಶದ ಸೇವೆಗೆ ನಿಲಬೇಕು
ಅ ಆ ಇ ಈ ಕನ್ನಡದ ಅಕ್ಷರ ಮಾಲೆ
ಅ.. ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ।।
ಔ ಅಂ ಅಃ ಔ ಅಂ ಅಃ ಔ ಅಂ ಅಃ ಅಃ ಹಾ ಹಾ..

No comments:
Post a Comment