Thursday, April 6, 2023

Araluva Hoovugale Aalisiri (ಅರಳುವ ಹೂವುಗಳೇ ಆಲಿಸಿರಿ)

Movie: My Autograph (2006)

Singer: Chitra

Song link: Click Here


Araluva hoovugale aalisiri

Balondu horata mareyadiri

Belagina kiranagale bannisiri

Irulinde belakuntu torisiri

Naleya nambike irali namma balali

Gelluva bharavaseyonde belakagali

Manave o manave nee alukadiru

Maleyo bharasidilo nee nadeyutiru ||


Manasu emba kannadiyu odedu hogabaradu

Balu ondu golu anta odi hogabaradu

Yarigilli novilla, yarigilli savilla

Kala kaleda hage ella mayavaguvantadu

Uli pettu beeluva kalle shileyagi nilluvudu

Dina nova nunguva jeevave neleyagi nilluvudu

Yarigilla aledata, yarigilla paradata

Namma prati kanasu illi nanasago olle kalavu munde ide

Manave o manave nee kuggadiru, betta bayalirali nee nuggutiru ||


Novu nalivu annodu bala railu kambigalu

Naduve nammadi payana, naguta sagu hagalirulu

Ene barali baalinali, dheya ondu joteyirali

Elu beelu ella dati eluteevi navugalu

Avamana ellariguntu ee lokada drustiyali

Navellaru endu onde aa devara srustiyali

Baligondu arthavide, hejjegondu dariyide

Ninna atma bala nina jotheyiralu, aakashave angaili

Manave o manave nee badalagu, ene sadhanegu nee modalagu ||


ಚಿತ್ರಗೀತೆ 


ಅರಳುವ ಹೂವುಗಳೇ ಆಲಿಸಿರಿ 

ಬಾಳೊಂದು ಹೋರಾಟ ಮರೆಯದಿರಿ 

ಬೆಳಗಿನ ಕಿರಣಗಳೇ ಬಣ್ಣಿಸಿರಿ 

ಇರುಳಿಂದೆ ಬೆಳಕುಂಟು ತೋರಿಸಿರಿ 

ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲೀ 

ಗೆಲ್ಲುವ ಭರವಸೆಯೊಂದೇ ಬೆಳಕಾಗಲೀ 

ಮನವೇ ಓ ಮನವೇ ನೀ ಅಳುಕದಿರು 

ಮಳೆಯೋ ಭರಸಿಡಿಲೋ ನೀ ನಡೆಯುತಿರು ।।ಪ।।


ಮನಸು ಎಂಬ ಕನ್ನಡಿಯು ಒಡೆದು ಹೋಗಬಾರದು 

ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು 

ಯಾರಿಗಿಲ್ಲಿ ನೋವಿಲ್ಲ ಯಾರಿಗಿಲ್ಲಿ ಸಾವಿಲ್ಲ 

ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು 

ಉಳಿ ಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು 

ಯಾರಿಗಿಲ್ಲ ಅಲೆದಾಟ ಯಾರಿಗಿಲ್ಲ ಪರದಾಟ 

ನಮ್ಮ ಪ್ರತಿ ಕನಸು ಇಲ್ಲಿ ನನಸಾಗೋ ಒಳ್ಳೆ ಕಾಲವು ಮುಂದೆ ಇದೆ 

ಮನವೇ ಓ ಮನವೇ ನೀ ಕುಗ್ಗದಿರು ಬೆಟ್ಟ ಬಯಲಿರಲೀ ನೀ ನುಗ್ಗುತಿರು ।।೧।।


ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು 

ನಡುವೆ ನಮ್ಮದೀ ಪಯಣ ನಗುತ ಸಾಗು ಹಗಲಿರುಳು 

ಏನೇ ಬರಲಿ ಬಾಳಿನಲಿ ಧ್ಯೆಯ ಒಂದು ಜೊತೆಯಿರಲಿ 

ಏಳು ಬೀಳು ಎಲ್ಲ ದಾಟಿ ಏಳುತೀವಿ ನಾವುಗಳು 

ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ 

ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಠಿಯಲಿ 

ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ 

ನಿನ್ನ ಆತ್ಮ ಬಲ ನಿನ ಜೊತೆಯಿರಲು ಆಕಾಶವೆ ಅಂಗೈಲೀ 

ಮನವೇ ಓ ಮನವೇ ನೀ ಬದಲಾಗೂ ಏನೇ ಸಾಧನೆಗೂ ನೀ ಮೊದಲಾಗೂ ।।೨।।






No comments:

Post a Comment