Bhaktigeete
Sri Purandara Dasara Keerthanegalu
Song link: Click Here
Raga: Kharaharapriya
Tala: Ekatala
Tirupati venkataramana
Ninagetake baradu karuna
Nambide ninnaya charana
Paripalisabeko karuna ||
Alagiriyindali banda, swami
Anjanagiriyali ninda
Kolalu dwaniyado chanda, namma
Kundalaraya mukunda ||
Moodalagiriyali ninta, muddu
Venkatapati balavanta
Eedilla ninage srikanta, ee
Erelu lokakananta ||
Kashi rameshwaradinda, alli
Kanike baruvudu chanda
Dasara koode govinda, alli
Dari nadevude chanda ||
Papavinashini snana, hari
Padodakave pana
Kopatapa nidhana, namma
Purandara vittalana dhyana ||
ಭಕ್ತಿಗೀತೆ
ತಿರುಪತಿ ವೆಂಕಟರಮಣ
ನಿನಗೇತಕೆ ಬಾರದು ಕರುಣ ।।ಪ ।।
ನಂಬಿದೆ ನಿನ್ನಯ ಚರಣ
ಪರಿಪಾಲಿಸಬೇಕೊ ಕರುಣ ।।ಅನು ।।
ಅಳಗಿರಿಯಿಂದಲಿ ಬಂದ , ಸ್ವಾಮಿ
ಅಂಜನಗಿರಿಯಲಿ ನಿಂದ
ಕೊಳಲು ಧ್ವನಿಯದೋ ಚಂದ, ನಮ್ಮ
ಕುಂಡಲರಾಯ ಮುಕುಂದ ।।೧।।
ಮೂಡಲಗಿರಿಯಲಿ ನಿಂತ, ಮುದ್ದು
ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ, ಈ
ಈರೇಳು ಲೋಕಕನಂತ ।।೨।।
ಕಾಶಿ ರಾಮೇಶ್ವರದಿಂದ, ಅಲ್ಲಿ
ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ, ಅಲ್ಲಿ
ದಾರಿ ನಡೆವುದೆ ಚಂದ ।।೩।।
ಪಾಪವಿನಾಶಿನಿ ಸ್ನಾನ, ಹರಿ
ಪಾದೋದಕವೇ ಪಾನ
ಕೋಪತಾಪ ನಿಧಾನ, ನಮ್ಮ
ಪುರಂದರ ವಿಠ್ಠಲನ ಧ್ಯಾನ ।।೪।।

No comments:
Post a Comment