Friday, December 2, 2022

Kashiyinda Bandanilli Vishwanatha (ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ )

Bhaktigeete

Song link: https:Click Here


Kashiyinda bandanilli vishwanatha

Kareyuvaru avananne manjunatha

Dharmada marmaviha ee nela

Kannadada hirimeya dharmastala ||


Netravati bandalu maleyagi

Devagangyanteye pavaneyagi

Annappa bandanilli sevegagi

Bhoota preta senege nathanagi ||


Hindu jaina dharmada sangamavilli

Endu sarutihanu bahubali

Inta punya kshetrake satiyelli

Yatrikane dhanyanagi nali nali ||


ಭಕ್ತಿಗೀತೆ 


ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ 

ಕರೆಯುವರು ಅವನನ್ನೇ ಮಂಜುನಾಥ 

ಧರ್ಮದಾ ಮರ್ಮವಿಹ ಈ ನೆಲ 

ಕನ್ನಡದ ಹಿರಿಮೆಯ ಧರ್ಮಸ್ಥಳ ।।ಪ ।।


ನೇತ್ರಾವತಿ ಬಂದಳು ಮಾಲೆಯಾಗಿ 

ದೇವಗಂಗೆಯಂತೆಯೇ ಪಾವನೆಯಾಗಿ 

ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ 

ಭೂತ ಪ್ರೇತ ಸೇನೆಗೆ ನಾಥನಾಗಿ ।।೧।।


ಹಿಂದು ಜೈನ ಧರ್ಮದಾ ಸಂಗಮವಿಲ್ಲಿ 

ಎಂದು ಸಾರುತಿಹನು ಬಾಹುಬಲಿ 

ಇಂಥ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ 

ಯಾತ್ರಿಕನೆ ಧನ್ಯನಾಗಿ ನಲಿ ನಲಿ ।।೨।।




No comments:

Post a Comment