Bhaktigeete
Song link: Click Here
Manava mantralayava madi
Hrudaya brundavanava madi
Bhaktiyennuva tungeyalli
Eejutiruva samayadalli
Jyothi tumbuvudu, kangala kanti tumbuvudu ||
Usiru usirali raghavendrana
Smarane beretiruvaga
Prabheyali guruvu kanisuva,
Brahmananda torisuva ||
Madige poojege oliyadatana
Mantra tantrake soladatana
Bhakti gelluvudu
Chitta shuddi nilisuvudu ||
Nitya nirmala bhava tumbida
Uttamottama gunava hondida
Satya sundaranu
Darushana needi harasuvanu ||
ಭಕ್ತಿಗೀತೆ
ಮನವ ಮಂತ್ರಾಲಯವ ಮಾಡಿ
ಹೃದಯ ಬೃಂದಾವನವ ಮಾಡಿ
ಭಕ್ತಿಯೆನ್ನುವ ತುಂಗೆಯಲ್ಲಿ
ಈಜುತಿರುವ ಸಮಯದಲ್ಲಿ
ಜ್ಯೋತಿ ತುಂಬುವುದು
ಕಂಗಳ ಕಾಂತಿ ತುಂಬುವುದು ।।ಪ ।।
ಉಸಿರು ಉಸಿರಲಿ ರಾಘವೇಂದ್ರನ
ಸ್ಮರಣೆ ಬೆರೆತಿರುವಾಗ
ಪ್ರಭೆಯಲಿ ಗುರುವು ಕಾಣಿಸುವ
ಬ್ರಹ್ಮಾನಂದ ತೋರಿಸುವ ।।೧।।
ಮಡಿಗೆ ಪೂಜೆಗೆ ಒಲಿಯದಾತನ
ಮಂತ್ರ ತಂತ್ರಕೆ ಸೋಲದಾತನ
ಭಕ್ತಿ ಗೆಲ್ಲುವುದು
ಚಿತ್ತ ಶುದ್ಧಿ ನಿಲಿಸುವುದು ।।೨।।
ನಿತ್ಯ ನಿರ್ಮಲ ಭಾವ ತುಂಬಿದ
ಉತ್ತಮೋತ್ತಮ ಗುಣವ ಹೊಂದಿದ
ಸತ್ಯ ಸುಂದರನೂ
ದರುಶನ ನೀಡಿ ಹರಸುವನು ।।೩।।

No comments:
Post a Comment