Bhavageete
Sahitya: K S Nissar Ahmed
Song link: Click Here
Ninna anragave belagiruvudennedeya
Irulu banina tumbu bimbavagi
Ninna sahavasave satatavu kadihudu
Bala dariya torugambavagi ||
Nittusira benkiyali anudinavu bendaru
Savi nudiya narugampu teliruvudu
Kambaniya uppinali kai toledu nondaru
Nasu nageya saviyanne susiruvudu ||
Yava punyavo kane, ninna olavina torege
Nanna manasina nereya harisiruvudu
Yava runavo eno ninna nemmadi karege
Nanna balina horeya sarisiruvudu ||
ಭಾವಗೀತೆ
ನಿನ್ನ ಅನುರಾಗವೇ ಬೆಳಗಿರುವುದೆನ್ನೆದೆಯ
ಇರುಳು ಬಾನಿನ ತುಂಬು ಬಿಂಬವಾಗಿ
ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳ ದಾರಿಯ ತೋರುಗಂಬವಾಗಿ ।।ಪ ।।
ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೂ
ಸವಿ ನುಡಿಯ ನರುಗಂಪು ತೇಲಿರುವುದು
ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸು ನಗೆಯ ಸವಿಯನ್ನೆ ಸೂಸಿರುವುದು ।।೧।।
ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು
ಯಾವ ಋಣವೋ ಏನೋ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು ।।೨।।

No comments:
Post a Comment