Sunday, December 25, 2022

Nadavirada Baduke (ನಾದವಿರದ ಬದುಕೇ)

Bhavageete

Sahitya: K S Nissar Ahmed

Song link:Click Here


Nadavirada baduke, unmada korabeda

Ee nelada jalava savidu, ravi karune mareyabeda ||


Biduvirada duditadalli baliyagadirali beragu

Sudu balinanchinalli meredirali kaleya seragu

Kale este iddarenu? kanasirada balu, bale?

Malebillu singarisada kari mugilinondu male! ||


Udayastagalali loka tanalla bariya mannu

Cheluvedurinalli satata hosatagabeku kannu

Chana chanavu jeeva magi, maruhuttu padeyutirali

Hosa nalava nelege tanu niladante nadeyutirali ||


ಭಾವಗೀತೆ 


ನಾದವಿರದ ಬದುಕೇ, ಉನ್ಮಾದ ಕೋರಬೇಡ 

ಈ ನೆಲದ ಜಲವ ಸವಿದು, ರವಿ ಕರುಣೆ ಮರೆಯಬೇಡ ।।ಪ ।।


ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು 

ಸುಡು ಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು 

ಕಳೆ ಎಷ್ಟೆ ಇದ್ದರೇನು ? ಕನಸಿರದ ಬಾಳು, ಬಾಳೆ ?

ಮಳೆಬಿಲ್ಲು ಸಿಂಗರಿಸದ ಕರಿ ಮುಗಿಲಿನೊಂದು ಮಾಲೆ ! ।।೧।।


ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು 

ಚೆಲುವೆದುರಿನಲ್ಲಿ ಸತತ ಹೊಸತಾಗಬೇಕು ಕಣ್ಣು 

ಚಣ ಚಣವು ಜೀವ ಮಾಗಿ, ಮರುಹುಟ್ಟು ಪಡೆಯುತಿರಲಿ 

ಹೊಸ ನಲವ ನೆಲೆಗೆ ತಾನು ನಿಲದಂತೆ ನಡೆಯುತಿರಲಿ ।।೨।।



No comments:

Post a Comment