Wednesday, December 14, 2022

Entha Anda Entha Chanda Sharadamma (ಎಂಥ ಅಂದ ಎಂಥ ಚೆಂದ ಶಾರದಮ್ಮ )

Bhaktigeete

Song link: https:Click Here


Entha anda entha chanda sharadamma

Ninna nodaleradu kannu nanage saladamma ||


Innu innu noduvase tumbitamma

Innu koti januma barali nanage saladamma 

Abhaya hasta nodi jeeva kuniyitamma

Ninna pada kamaladalli shiravu bagitamma ||


Entha shakti ninnalideyo sharadamma

Ninna nodi hado aase banditamma

Ratnadantha matugalane adisamma

Olle raga bhavashakti tumbi hadisamma ||


Alli illi odo manasu nannadamma

Bega bandu nelesu alli sharadamma

Bere enu beku endu kelenamma

Ninna veene tanti madi nudisu sharadamma ||


ಭಕ್ತಿಗೀತೆ 


ಎಂಥ ಅಂದ ಎಂಥ ಚೆಂದ ಶಾರದಮ್ಮ 

ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ।।ಪ ।।


ಇನ್ನು ಇನ್ನು ನೋಡುವಾಸೆ ತುಂಬಿತಮ್ಮ 

ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ 

ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ 

ನಿನ್ನ ಪಾದ ಕಮಲದಲ್ಲಿ ಶಿರವು ಬಾಗಿತಮ್ಮ ।।೧।।


ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ 

ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ 

ರತ್ನದಂಥ ಮಾತುಗಳನೇ ಆಡಿಸಮ್ಮ 

ಒಳ್ಳೆ ರಾಗ ಭಾವಶಕ್ತಿ ತುಂಬಿ ಹಾಡಿಸಮ್ಮ ।।೨।।


ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮ 

ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ 

ಬೇರೆ ಏನು ಬೇಕು ಎಂದು ಕೇಳೆನಮ್ಮ 

ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ।।೩।।



No comments:

Post a Comment