Sunday, December 11, 2022

Hosabalina Hosilali Nintiruva (ಹೊಸ ಬಾಳಿನ ಹೊಸಿಲಲಿ ನಿಂತಿರುವ )

Movie: Shravana Bantu (1984)

Singer: Dr. Rajkumar

Song link: https:Click Here


Hosa balina hosilali nintiruva

Hosa jodige shubhavagali

hosa aaseya kadalali telutiha

Nava jodige sukhavagali ||


Ee swargada bagilu teredide indu 

Ee shubha veleyali

Aa devategalu ullasadi bandaru 

Nimmanu harasutali

Idu brahmanu beseda anubandha

Anugalavu needali aananda || 


Ee hacchane hasurina toranavu

Suswagatavendu helutide

Ee mangala vadhyavu molagiralu

Shubhakaryada sambhrama kanutide

Januma janumada snehavidu

Samsarada balige nandi idu ||


Ee shravana masavu tanda udugore

Ullasava tarali

Aa manjunathana krupa katakshavu

Endendu nimagirali

Onde varushada avadhiyali

Hasukandanu madilali nagutirali ||


ಚಿತ್ರಗೀತೆ 


ಹೊಸ ಬಾಳಿನ ಹೊಸಿಲಲಿ ನಿಂತಿರುವ 

ಹೊಸ ಜೋಡಿಗೆ ಶುಭವಾಗಲಿ 

ಹೊಸ ಆಸೆಯ ಕಡಲಲಿ ತೇಲುತಿಹ 

ನವ ಜೋಡಿಗೆ ಸುಖವಾಗಲಿ ।।ಪ ।।


ಈ ಸ್ವರ್ಗದ ಬಾಗಿಲು ತೆರೆದಿದೆ ಇಂದು 

ಈ ಶುಭವೇಳೆಯಲಿ 

ಆ ದೇವತೆಗಳು ಉಲ್ಲಾಸದಿ ಬಂದರು 

ನಿಮ್ಮನು ಹರಸುತಲಿ 

ಇದು ಬ್ರಹ್ಮನು ಬೆಸೆದಾ ಅನುಬಂಧ 

ಅನುಗಾಲವು ನೀಡಲಿ ಆನಂದ ।।೧।।


ಈ ಹಚ್ಚನೆ ಹಸುರಿನ ತೋರಣವು 

ಸುಸ್ವಾಗತವೆಂದು ಹೇಳುತಿದೆ 

ಈ ಮಂಗಳ ವಾದ್ಯವು ಮೊಳಗಿರಲು 

ಶುಭಕಾರ್ಯದ ಸಂಭ್ರಮ ಕಾಣುತಿದೆ 

ಜನುಮ ಜನುಮದ ಸ್ನೇಹವಿದು 

ಸಂಸಾರದ ಬಾಳಿಗೆ ನಾಂದಿ ಇದು ।।೨।।


ಈ ಶ್ರಾವಣ ಮಾಸವು ತಂದಾ ಉಡುಗೊರೆ 

ಉಲ್ಲಾಸವ ತರಲಿ 

ಆ ಮಂಜುನಾಥನಾ ಕೃಪಾ ಕಟಾಕ್ಷವು 

ಎಂದೆಂದೂ ನಿಮಗಿರಲಿ 

ಒಂದೇ ವರುಷದ ಅವಧಿಯಲಿ 

ಹಸುಕಂದನು ಮಡಿಲಲಿ ನಗುತಿರಲಿ ।।೩।। 



No comments:

Post a Comment