Padya
Sahitya: G P Rajaratnam
Kusumari ! kusumari !
Kusumari beke kusumari !
Annana bennige maiyanu besedu
Kattina suttalu kaigalanesedu
Sontada suttalu kalanu bigidu
Annanu negedare tanu negedu
Muddagiruvudu kusumari !
Kannadanadina kusumari !
Kusumari ! kusumari !
Kusumari beke kusumari !
Kedarida kudala mareyindiniki
I ! I ! ennuta kaduta kenaki
Belagina javada kattaleyalli
Ele bisilerechuva suryana holi
Muddagiruvudu kusumari !
Kannadanadina kusumari !
Kusumari ! kusumari !
Kusumari beke kusumari !
Bhumiya baleyindakashakke
Sarrenderuta bannada rekke
Haraduta haduva hakkiya hage
Haradutaliruvudu bennina mege
Kannadanadina kusumari !
Kusumari beke kusumari !
ಪದ್ಯ
ಕೂಸುಮರಿ ! ಕೂಸುಮರಿ !
ಕೂಸುಮರಿ ಬೇಕೇ ಕೂಸುಮರಿ !
ಅಣ್ಣನ ಬೆನ್ನಿಗೆ ಮೈಯನು ಬೆಸೆದು
ಕತ್ತಿನ ಸುತ್ತಲು ಕೈಗಳನೆಸೆದು
ಸೊಂಟದ ಸುತ್ತಲು ಕಾಲನು ಬಿಗಿದು
ಅಣ್ಣನು ನೆಗೆದರೆ ತಾನೂ ನೆಗೆದು
ಮುದ್ದಾಗಿರುವುದು ಕೂಸುಮರಿ
ಕನ್ನಡನಾಡಿನ ಕೂಸುಮರಿ !
ಕೂಸುಮರಿ ! ಕೂಸುಮರಿ !
ಕೂಸುಮರಿ ಬೇಕೇ ಕೂಸುಮರಿ !
ಕೆದರಿದ ಕೂದಲ ಮರೆಯಿಂದಿಣಿಕಿ
ಐ ! ಐ ! ಎನ್ನುತ ಕಾಡುತ ಕೆಣಕಿ
ಬೆಳಗಿನ ಜಾವದ ಕತ್ತಲೆಯಲ್ಲಿ
ಎಳೆ ಬಿಸಿಲೆರೆಚುವ ಸೂರ್ಯನ ಹೋಲಿ
ಮುದ್ದಾಗಿರುವುದು ಕೂಸುಮರಿ !
ಕೂಸುಮರಿ ! ಕೂಸುಮರಿ !
ಕೂಸುಮರಿ ಬೇಕೇ ಕೂಸುಮರಿ !
ಭೂಮಿಯ ಬಲೆಯಿಂದಾಕಾಶಕ್ಕೆ
ಸರೆ)೦ದೇರುತ ಬಣ್ಣದ ರೆಕ್ಕೆ
ಹರಡುತ ಹಾಡುವ ಹಕ್ಕಿಯ ಹಾಗೆ
ಹರಡುತಲಿರುವುದು ಬೆನ್ನಿನ ಮೇಗೆ
ಕನ್ನಡನಾಡಿನ ಕೂಸುಮರಿ !
ಕೂಸುಮರಿ ಬೇಕೇ ಕೂಸುಮರಿ !
¸

No comments:
Post a Comment