Bhavageete
Sahitya: Da Ra Bendre
Song link: Click Here
Malladada giniye, neenillalladada kuliti yaka, ae giniye, ae giniye,
Pacche payarina naada acchu, accha ottida maiya siriye, ae giniye !
Hanna melitu balita, ninna, sanna chunchina kencha sobaga, ae giniye, ae giniye!
Maramaradakondu maata kalisi, maravattena maatina jaani, ae giniye, ae giniye!
Totadalle oota, ninna chellata, gaaligopuradaaga,..,
Hindanagali bande illi kanda kadige baayi biduve, ae giniye, ae giniye!
Husiya ragali yaaka, innu hosa hosa baalina haadanu taara haara, ae giniye, ae giniye,
Moodana kempu moodidalli, hooda ninna hosa samsara, ae giniye, ae giniye!
ಭಾವಗೀತೆ
ಮಲ್ಲಾಡದ ಗಿಣಿಯೇ, ನೀನಿಲ್ಲಲ್ಲಾಡದ ಕುಳಿತಿ ಯಾಕ, ಏ ಗಿಣಿಯೇ, ಏ ಗಿಣಿಯೇ,
ಪಚ್ಚೆಪಯರಿನ ನಾಡ ಅಚ್ಚು, ಅಚ್ಚ ಒತ್ತಿದ ಮೈಯ ಸಿರಿಯೇ, ಏ ಗಿಣಿಯೇ!
ಹಣ್ಣ ಮೆಲಿತು ಬಲಿತ, ನಿನ್ನ ಸಣ್ಣ ಚುಂಚಿನ ಕೆಂಚ ಸೊಬಗ, ಏ ಗಿಣಿಯೇ, ಏ ಗಿಣಿಯೇ,
ಮರಮರದಕೊಂದು ಮಾತ, ಕಲಿಸಿ ಮರವಟ್ಟೇನ ಮಾತಿನ ಜಾಣಿ, ಏ ಗಿಣಿಯೇ, ಏ ಗಿಣಿಯೇ!
ತೋಟದಲ್ಲೆ ಊಟ, ನಿನ್ನ ಚೆಲ್ಲಾಟ ಗಾಳಿಗೋಪುರದಾಗ.... ,
ಹಿಂಡನಗಲಿ ಬಂದೆ, ಇಲ್ಲಿ ಕಂಡ ಕಡಿಗೆ ಬಾಯಿ ಬಿಡುವೆ, ಏ ಗಿಣಿಯೇ, ಏ ಗಿಣಿಯೇ!
ಹುಸಿಯಾ ರಗಳಿ ಯಾಕ, ಇನ್ನು ಹೊಸ ಹೊಸ ಬಾಳಿನ ಹಾಡನು ತಾರಾ, ಹಾರ, ಏ ಗಿಣಿಯೇ, ಏ ಗಿಣಿಯೇ,
ಮೂಡಣ ಕೆಂಪು ಮೂಡಿದಲ್ಲಿ ಹೂಡ ನಿನ್ನ ಹೊಸ ಸಂಸಾರ, ಏ ಗಿಣಿಯೇ, ಏ ಗಿಣಿಯೇ!
No comments:
Post a Comment