Movie: Seeta (1970)
Singer: SPB
Song link: Click Here
Shubhashaya, Shubhashaya..!
Madu maganigu - madumagaligu,
Shubhashaya !
Hosa hareyada - hosa jodige,
Shubhashaya !
Maduveya ee bandha, anuraagada anubandha,
Elelu janumadalu teerada sambandha ||
Saviyaada maatu, sihiyaada oota,
Sogasaada notavirali,
Mane tumbuvantha nage chelluvantha,
Muddada maguvu barali ||
Manasannu aritu ondagi beretu,
Nadedaaga baalu kavite,
Nurondu varusha chellirali harusha,
Belagirali olava hanate ||
Siritanada sihiyo, badatanada kahiyo,
Nimagendu onde irali,
Samanaada preeti toruvude reeti,
Birugaali ene barali ||
ಚಿತ್ರಗೀತೆ
ಶುಭಾಶಯ - ಶುಭಾಶಯ!
ಮದು ಮಗನಿಗೂ - ಮದು ಮಗಳಿಗೂ,
ಶುಭಾಶಯ !
ಹೊಸ ಹರೆಯದಾ - ಹೊಸ ಜೋಡಿಗೆ,
ಶುಭಾಶಯ!
ಮುದುವೆಯ ಈ ಬಂಧಾ, ಅನುರಾಗದ ಅನುಬಂಧಾ,
ಏಳೇಳು ಜನುಮದಳು ತೀರದ ಸಂಬಂಧ ।।ಪ।।
ಸವಿಯಾದ ಮಾತು ಸಿಹಿಯಾದ ಊಟ,
ಸೊಗಸಾದ ನೋಟವಿರಲಿ,
ಮನೆ ತುಂಬುವಂಥ ನಗೆ ಚೆಲ್ಲುವಂಥ,
ಮುದ್ದಾದ ಮಗುವು ಬರಲಿ ।।೧।।
ಮನಸನ್ನು ಅರಿತು ಒಂದಾಗಿ ಬೆರೆತು,
ನಡೆದಾಗ ಬಾಳು ಕವಿತೆ,
ನೂರೊಂದು ವರುಷ ಚೆಲ್ಲಿರಲಿ ಹರುಷ,
ಬೆಳಗಿರಲಿ ಒಲವ ಹಣತೆ ।।೨।।
ಸಿರಿತನದ ಸಿಹಿಯೋ ಬಡತನದ ಕಹಿಯೋ,
ನಿಮಗೆಂದು ಒಂದೇ ಇರಲಿ,
ಸಮನಾದ ಪ್ರೀತಿ ತೋರುವುದೇ ರೀತಿ ,
ಬಿರುಗಾಳಿ ಏನೇ ಬರಲಿ ।।೩।।

No comments:
Post a Comment