Movie: Manebelagida Sose (1973)
Singer: Vani Jairam
Song link: Click Here
Baa baara nageya taara, chouti cheluvu tanda sundara,
Baala bhagyada chandira ||
Naguva nandana nee taruve, ninna muddisi naa nalive,
Neenu nammaya kalpa taruve, neenu bandire naanu geluve ||
Ambegaalina nanda kishorane, gokula venisuva namma ee mane,
Ella manava gelluva cheluvane, nalme tolina baala gopala ||
Mane mandiya mana ondaagiside, sundara kanasina nija roopade,
Chendada baalina munnudi barede, bhagya chandrane ilidu bande ||
ಚಿತ್ರಗೀತೆ
ಬಾ ಬಾರಾ ನಗೆಯ ತಾರಾ, ಚೌತಿ ಚೆಲುವು ತಂದ ಸುಂದರ,
ಬಾಳ ಭಾಗ್ಯದ ಚಂದಿರ ।।ಪ।।
ನಗುವ ನಂದನ ನೀ ತರುವೆ, ನಿನ್ನ ಮುದ್ದಿಸಿ ನಾ ನಲಿವೆ,
ನೀನು ನಮ್ಮಯ ಕಲ್ಪ ತರುವೆ, ನೀನು ಬಂದಿರೆ ನಾನು ಗೆಲುವೆ
।।೧।।
ಅಂಬೆಗಾಲಿನ ನಂದ ಕಿಶೋರನೆ, ಗೋಕುಲ ವೆನಿಸುವ ನಮ್ಮ ಈ ಮನೆ,
ಎಲ್ಲ ಮನವ ಗೆಲ್ಲುವ ಚೆಲುವನೆ, ನಲ್ಮೆ ತೋಳಿನ ಬಾಲ ಗೋಪಾಲ
।।೨।।
ಮನೆ ಮಂದಿಯ ಮನ ಒಂದಾಗಿಸಿದೆ, ಸುಂದರ ಕನಸಿನ ನಿಜ ರೂಪಾದೆ,
ಚೆಂದದ ಬಾಳಿನ ಮುನ್ನುಡಿ ಬರೆದೆ, ಭಾಗ್ಯ ಚಂದ್ರನೆ ಇಳಿದು ಬಂದೆ
।।೩।।
No comments:
Post a Comment