Tuesday, January 9, 2024

Aa Mogavu Entha Cheluvu (ಆ ಮೊಗವು ಎಂಥಾ ಚೆಲುವು)

Movie: Bangarada Hoovu (1967)

Singer: P B Srinivas

Song link: Click Here


Aa mogavu entha cheluvu

Manava seleva, bangarada hoovu

Aa mogavu entha cheluvu ||


Minchante bande manadalli ninte

Mai maresi mana kunisi aananda tande

Kudi nota beeri nasu naguva tori

Hindendu kaanada sukhavannu tande

Chandirana nachisuva cheluvanne padeda ||


Ninna nadeyu kuniva navilante iralu

Innentha sobagu nee natyavaadalu

Savimaatu nooraru kannalli iralu

Innentha sogasu nee haadutiralu

Aralida kendavareya andava meerisuva ||


ಚಿತ್ರಗೀತೆ 


ಆ ಮೊಗವು ಎಂಥಾ ಚೆಲುವು 

ಮನವ ಸೆಳೆವ, ಬಂಗಾರದ ಹೂವು 

ಆ ಮೊಗವು ಎಂಥಾ ಚೆಲುವು ।।ಪ।।


ಮಿಂಚಂತೆ ಬಂದೆ ಮನದಲ್ಲಿ ನಿಂತೆ 

ಮೈ ಮರೆಸಿ ಮನ ಕುಣಿಸಿ ಆನಂದ ತಂದೆ 

ಕುಡಿ ನೋಟ ಬೀರಿ ನಸು ನಗುವ ತೋರಿ 

ಹಿಂದೆಂದು ಕಾಣದ ಸುಖವನ್ನು ತಂದೆ 

ಚಂದಿರನ ನಾಚಿಸುವ ಚೆಲುವನ್ನೆ ಪಡೆದ ।।೧।।


ನಿನ್ನ ನಡೆಯು ಕುಣಿವಾ ನವಿಲಂತೆ ಇರಲು 

ಇನ್ನೆಂಥ ಸೊಬಗು ನೀ ನಾಟ್ಯವಾಡಲು 

ಸವಿಮಾತು ನೂರಾರು ಕಣ್ಣಲ್ಲಿ ಇರಲು 

ಇನ್ನೆಂಥ ಸೊಗಸು ನೀ ಹಾಡುತಿರಲು 

ಅರಳಿದ ಕೆಂದಾವರೆಯ ಅಂದವ ಮೀರಿಸುವ ।।೨।।

                            



No comments:

Post a Comment