Movie: Nagamandala (1997)
Sahitya: Gopal Vajpeyee
Singer: Sangeeta Katti
Song link: Click Here
Kambada myalina gombeye
Nambale na ninna nageyanna
Bhittiya myalina chittarave
Chittagotta hela uttaarava
Obbale nanilli tabbibbugondihena
Mabbu hariyuvudena, habbavaguvudena ||
Neeroleya nigi kenda satyave, ee abhyanjanavinnu nityave
Olle ghamagudutiyalle seegeye, ninna vasaneye haradirali heegeye
Obbale nanilli tabbibbugondihena
Mabbu hariyuvudena, habbavaguvudena ||
Oppisuve hoo hannu bhagavanta, neteele harasu nage iralanta
Karpoorava belaguve devane, tappadeye baralenna gunavanta
Obbale nanilli tabbibbugondihena
Mabbu hariyuvudena, habbavaguvudena ||
ಚಿತ್ರಗೀತೆ
ಕಂಬದ ಮ್ಯಾಲಿನ ಗೊಂಬೆಯೇ
ನಂಬಲೇ ನಾ ನಿನ್ನಾ ನಗೆಯನ್ನಾ
ಭಿತ್ತಿಯ ಮ್ಯಾಲಿನ ಚಿತ್ತಾರವೇ
ಚಿತ್ತಗೊಟ್ಟ ಹೇಳ ಉತ್ತಾರವಾ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।ಪ।।
ನೀರೊಲೆಯ ನಿಗಿ ಕೆಂಡ ಸತ್ಯವೇ, ಈ ಅಭ್ಯ೦ಜನವಿನ್ನು ನಿತ್ಯವೇ
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ, ನಿನ್ನ ವಾಸನೆಯೇ ಹರಡಿರಲಿ ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।೧।।
ಒಪ್ಪಿಸುವೆ ಹೂ ಹಣ್ಣು ಭಗವಂತ, ನೆತ್ತೀಲೆ ಹರಸು ನಗೆ ಇರಲಂತ
ಕರ್ಪೂರವ ಬೆಳಗುವೆ ದೇವನೇ, ತಪ್ಪದೆಯೇ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ, ಹಬ್ಬ ವಾಗುವುದೇನಾ ।।೨।।

No comments:
Post a Comment