Bhavageete
Sahitya: G S Shivarudrappa
Singer: Manjula Gururaj
Song link: Click Here
Ruthu vasanta bandanido
Ruthu vasanta bandanido
Ullasava tandanido (2)
Ruthu vasanta bandanido, bandanido ||
Mabbu kavida, mounagalali
Hosa danigala hommisee
Udurideleya kombegalalee (2)
Bannada hole hariyisi ||
Battidedege, bharavasegala
Hosa bavutaverisi
Hale gaadige, hosa kudureya (2)
Hosa galiya jodisi ||
ಭಾವಗೀತೆ
ಋತು ವಸಂತ ಬಂದನಿದೋ
ಋತು ವಸಂತ ಬಂದನಿದೋ
ಉಲ್ಲಾಸವಾ ತಂದನಿದೋ (೨)
ಋತು ವಸಂತ ಬಂದನಿದೋ, ಬಂದನಿದೋ ।।ಪ।।
ಮಬ್ಬು ಕವಿದ, ಮೌನಗಳಲಿ
ಹೊಸ ದನಿಗಳ ಹೊಮ್ಮಿಸೀ
ಉದುರಿದೆಲೆಯಾ ಕೊಂಬೆಗಳಲೀ (೨)
ಬಣ್ಣದ ಹೊಳೆ ಹರಿಯಿಸಿ ।।೧।।
ಬತ್ತಿದೆದೆಗೆ, ಭರವಸೆಗಳಾ
ಹೊಸ ಬಾವುಟವೇರಿಸಿ
ಹಳೆ ಗಾಡಿಗೆ, ಹೊಸ ಕುದುರೆಯ (೨)
ಹೊಸ ಗಾಲಿಯ ಜೋಡಿಸಿ ।।೨।।

No comments:
Post a Comment