Thursday, August 31, 2023

Nannolu Na Ninnolu Nee (ನನ್ನೊಳು ನಾ, ನಿನ್ನೊಳು ನೀ)

Bhavageete

Sahitya: P T Narasimhachar

Singer: Manjula Gururaj

Song link: Click Here


Nannolu na ninnolu nee

Oliva muntinte na nee (2)

Ninnolu na Nannolu nee

Olida melinte na nee

Ide olavina SaRiGaMaPaDaNi ||


Cheluvu munna, holalittitu nanna

Indu cheluvu, holaliduvudu ninna (2)

Bayake na.. salike nee (2)

Olida melinte na nee

Ide olavina SaRiGaMaPaDaNi ||


Oliva munna, jagakellaku na

Olida mele, jagakellaku nee (2)

Hinnele na.. munnele nee (2)

Olida melinte na nee

Ide olavina SaRiGaMaPaDaNi ||


ಭಾವಗೀತೆ 


ನನ್ನೊಳು ನಾ, ನಿನ್ನೊಳು ನೀ 

ಒಲಿವ ಮುಂತಿಂತೆ ನಾ ನೀ (೨)

ನಿನ್ನೊಳು ನಾ, ನನ್ನೊಳು ನೀ 

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।ಪ।।


ಚೆಲುವು ಮುನ್ನ, ಹೊಳಲಿಟ್ಟಿತು ನನ್ನಾ 

ಇಂದು ಚೆಲುವು, ಹೊಳಲಿಡುವುದು ನಿನ್ನಾ (೨)

ಬಯಕೆ ನಾ .. ಸಲಿಕೆ ನೀ .. (೨)

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।೧।।


ಒಲಿವ ಮುನ್ನ, ಜಗಕೆಲ್ಲಕೂ ನಾ 

ಒಲಿದ ಮೇಲೆ, ಜಗಕೆಲ್ಲಕೂ ನೀ  (೨)

ಹಿನ್ನಲೆ ನಾ .. ಮುನ್ನೆಲೆ ನೀ .. (೨)

ಒಲಿದ ಮೇಲಿಂತೆ ನಾ ನೀ 

ಇದೇ ಒಲವಿನ ಸರಿಗಮಪದನಿ ।।೨।।







No comments:

Post a Comment