Bhaktigeete
Singer: B K Sumitra
Song link: Click Here
Kusina kandira.. kusina kandira.. kusina kandira
Pralhaadana kandira, sri sudhindrara kandira (2) ||
Veena vamshadi janisitu kusu
vaniya korike mannipa kusu
Venugopalana kunisitu kusu
Panini shastrada parimala kusu ||
Rajata rathadi rarajipa kusu
Vijayaraya kondadida kusu
Janapara suyoga varipa kusu
Kanaka kavachava dharisida kusu ||
Ramara santata pujipa kusu
Kamitatarthagala karunipa kusu
Bhimana bhinnapa laalipa kusu
Raghavendranembo pesarina kusu ||
ಭಕ್ತಿಗೀತೆ
ಕೂಸಿನ ಕಂಡಿರಾ .. ಕೂಸಿನ ಕಂಡಿರಾ .. ಕೂಸಿನ ಕಂಡಿರಾ ..
ಪ್ರಲ್ಹಾದನ ಕಂಡಿರಾ, ಶ್ರೀ ಸುಧೀಂದ್ರರ ಕಂದನ ಕಂಡಿರಾ
।।ಪ ।।
ವೀಣಾ ವಂಶದಿ ಜನಿಸಿತು ಕೂಸು
ವಾಣಿಯ ಕೋರಿಕೆ ಮನ್ನಿಪ ಕೂಸು
ವೇಣುಗೋಪಾಲನ ಕುಣಿಸಿತು ಕೂಸು
ಪಾಣಿನಿ ಶಾಸ್ತ್ರದ ಪರಿಮಳ ಕೂಸು ।।೧।।
ರಜತ ರಥದಿ ರಾರಾಜಿಪ ಕೂಸು
ವಿಜಯರಾಯ ಕೊಂಡಾಡಿದ ಕೂಸು
ಜನಪರ ಸುಯೋಗ ವಾರಿಪ ಕೂಸು
ಕನಕ ಕವಚವ ಧರಿಸಿದ ಕೂಸು ।।೨।।
ರಾಮರ ಸಂತತ ಪೂಜಿಪ ಕೂಸು
ಕಾಮಿತಾರ್ಥಗಳ ಕರುಣಿಪ ಕೂಸು
ಭೀಮನ ಭಿನ್ನಪ ಲಾಲಿಪ ಕೂಸು
ರಾಘವೇಂದ್ರನೆಂಬೋ ಪೆಸರಿನ ಕೂಸು ।।೩।।

No comments:
Post a Comment