Bhavageete
Sahitya: H S Venktesh Murthy
Song link: Click Here
Vasanta baralu, mara chiguruvudeke
Yaranu kelali nanu
Gaali beesi hoo kampu bayalige
Yaranu durali nanu ||
Male biddare nadi ukkuvudeke
Yaranu kelali nanu
Tabbikonda dandeya tol sadile
Yaranu durali nanu ||
Surya mudidare mannina edegu
Baruvudu honnina banna
Kirana taagidare kesarina tavare
Eke tereyuvudu kanna ||
Hunnime chandrana kanda kadalu
Gari bicchi kuniyuvudeke
Eke keke mai manita kunitavu
Yara duruvudeke ||
ಭಾವಗೀತೆ
ವಸಂತ ಬರಲು, ಮರ ಚಿಗುರುವುದೇಕೆ
ಯಾರನು ಕೇಳಲಿ ನಾನು
ಗಾಳಿ ಬೀಸೆ ಹೂ ಕಂಪು ಬಯಲಿಗೆ
ಯಾರನು ದೂರಲಿ ನಾನು ।।ಪ।।
ಮಳೆ ಬಿದ್ದರೆ ನದಿ ಉಕ್ಕುವುದೇಕೆ
ಯಾರನು ಕೇಳಲಿ ನಾನು
ತಬ್ಬಿಕೊಂಡ ದಂಡೆಯ ತೋಳ್ ಸಡಿಲೆ
ಯಾರನು ದೂರಲಿ ನಾನು ।।೧।।
ಸೂರ್ಯ ಮೂಡಿದರೆ ಮಣ್ಣಿನ ಎದೆಗೂ
ಬರುವುದು ಹೊನ್ನಿನ ಬಣ್ಣ
ಕಿರಣ ತಾಗಿದರೆ ಕೆಸರಿನ ತಾವರೆ
ಏಕೆ ತೆರೆಯುವುದು ಕಣ್ಣ ।।೨।।
ಹುಣ್ಣಿಮೆ ಚಂದ್ರನ ಕಂಡ ಕಡಲು
ಗರಿ ಬಿಚ್ಚಿ ಕುಣಿಯುವುದೇಕೆ
ಏಕೆ ಕೇಕೆ ಮೈ ಮಣಿತ ಕುಣಿತವು
ಯಾರನು ದುರುವುದೇಕೇ ।।೩।।
No comments:
Post a Comment