Wednesday, June 22, 2022

Bombe Helutaite (ಬೊಂಬೆ ಹೇಳುತೈತೆ)



  • Movie: Rajakumara(2017)
  • Singer: Vijay Prakash
  • Song link: Click Here


Bombe helutaite matte helutaite

Neene Rajakumara (2)


Hosa belakondu hosilige bandu

Belagide maneya, managala indu

Aaradhiso rarajiso rajaratnana

Aadisiye nodu belisiye nodu

Endu soladu 

Sotu taleya bagadu  ||


Gudisale aagali, aramane aagali

Aatave nilladu, endu aata nilladu

Hiriyare irali, kiriyare barali

Bedhave toradu, endu bedha toradu

Ella iddu eanu illada hage badukiruva

Aakasha nodada kaiye ninnadu, preeti hanchiruva

Jothegiru neenu appana haage

Hannele kayo vinayadi heege

Ninnanu padeda navu puneeta

Balu nagu naguta ||


Tane uridu manege belakukoduva deepavidu

Nanda deepave idu

Aadisuvatana karuneya mele namma patravu

Samayada sutra avanadu

Ondu muttina katheya helitu ee bombe

Aa katheyallidda rajanange neenu bande

Yogavu omme baruvudu namage

Yogyate onde ulivudu konege

Suryanobba chandranobba rajanu obba 

ee rajanu obba

Aadisiye nodu, belisiye nodu

Endu soladu

Sotu taleya bagadu ||


ಚಿತ್ರಗೀತೆ 


ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ 

ನೀನೇ ರಾಜಕುಮಾರ (೨)


ಹೊಸ ಬೆಳಕೊಂದು ಹೊಸಿಲಿಗೆ ಬಂದು 

ಬೆಳಗಿದೆ ಮನೆಯ ಮನಗಳ ಇಂದು 

ಆರಾಧಿಸೋ ರಾರಾಜಿಸೋ ರಾಜರತ್ನನ 

ಆಡಿಸಿಯೇ ನೋಡು ಬೀಳಿಸಿಯೇ ನೋಡು 

ಎಂದು ಸೋಲದು 

ಸೋತು ತಲೆಯ ಬಾಗದು ।।ಬೊಂಬೆ ಹೇಳುತೈತೆ।।


ಗುಡಿಸಲೆ ಆಗಲಿ ಅರಮನೆ ಆಗಲಿ 

ಆಟವೆ ನಿಲ್ಲದು, ಎಂದು ಆಟ ನಿಲ್ಲದು 

ಹಿರಿಯರೆ ಇರಲಿ ಕಿರಿಯರೆ ಬರಲಿ 

ಭೇದವೇ ತೋರದು, ಎಂದು ಬೇಧ ತೋರದು 

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ 

ಆಕಾಶ ನೋಡದ ಕೈಯೆ ನಿನ್ನದು, ಪ್ರೀತಿ ಹಂಚಿರುವ 

ಜೊತೆಗಿರು ನೀನು ಅಪ್ಪನ ಹಾಗೆ 

ಹಣ್ಣೆಲೆ ಕಾಯೋ ವಿನಯದಿ ಹೀಗೆ 

ನಿನ್ನನು ಪಡೆದ ನಾವು ಪುನೀತ 

ಬಾಳು ನಗು ನಗುತ ।।ಬೊಂಬೆ ಹೇಳುತೈತೆ।।


ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು 

ನಂದಾ ದೀಪವೇ ಇದು 

ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು 

ಸಮಯದ ಸೂತ್ರ ಅವನದು 

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ 

ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ 

ಯೋಗವು ಒಮ್ಮೆ ಬರುವುದು ನಮಗೆ 

ಯೋಗ್ಯತೆ ಒಂದೇ ಉಳಿವುದು ಕೊನೆಗೆ 

ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ

ಈ ರಾಜನು ಒಬ್ಬ 

ಆಡಿಸಿಯೇ ನೋಡು ಬೀಳಿಸಿಯೇ ನೋಡು 

ಎಂದು ಸೋಲದು ಸೋತು ತಲೆಯ ಬಾಗದು 

।।ಬೊಂಬೆ ಹೇಳುತೈತೆ।।




No comments:

Post a Comment