Bhaktigeete
Purandara Dasara Keerthanegalu
Song link: Click Here
Raga: Pantuvarali
Tala: Atatala
Hindilla swami mundilla
Govinda neenallade iha paravilla
Parara bedippante gatiyayitalla
Narara tutisi nalige baradayitalla
Paravilla ihavilla narajanma stiravalla
Narage pamarage papada panjarage ||
Tanuvu tannadalla tannavar tanagilla
Anukulaviruvaga sati sutarella
Anuvu tappi mana tallanisuvaga
Vanaja nabha neenillade yarilla ||
Matapitru bandhugalu muntagi
Sampreetiyoliralu manniparai ella
Kataranag yama kondoiyyuvaga
Samgata inyarayya purandara vittala || sri
ಭಕ್ತಿಗೀತೆ
ಹಿಂದಿಲ್ಲ ಸ್ವಾಮಿ ಮುಂದಿಲ್ಲ
ಗೋವಿಂದ ನೀನಲ್ಲದೆ ಇಹ ಪರವಿಲ್ಲ ।।ಪ ।।
ಪರರ ಬೀಡಿಪ್ಪಂತೆ ಗತಿಯಾಯಿತಲ್ಲ
ನರರ ತುತಿಸಿ ನಾಲಿಗೆ ಬರಡಾಯಿತಲ್ಲ
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾಪದ ಪಂಜರಗೆ ।।೧।।
ತನುವು ತನ್ನದಲ್ಲ ತನ್ನವರ್ ತನಗಿಲ್ಲ
ಅನುಕೂಲ ವಿರುವಾಗ ಸತಿಸುತರೆಲ್ಲ
ಅನುವು ತಪ್ಪಿ ಮನ ತಲ್ಲಣಿಸುವಾಗ
ವನಜ ನಾಭ ನೀನಿಲ್ಲದೆ ಯಾರಿಲ್ಲ ।।೨।।
ಮಾತಾಪಿತೃ ಬಂಧುಗಳು ಮುಂತಾಗಿ
ಸಂಪ್ರೀತಿಯೊಳಿರಲು ಮನ್ನಿಪರೈ ಎಲ್ಲ
ಕಾತರನಾಗ್ ಯಮ ಕೊಂಡೊಯ್ಯುವಾಗ
ಸಂಗಾತ ಇನ್ಯಾರೈಯ್ಯ ಪುರಂದರ ವಿಠ್ಠಲ ।।೩।। ಶ್ರೀ

No comments:
Post a Comment