Puranadara Dasara Keerthanegalu
Song link: Click Here
Raga: Shankarabharana
Tala: Atatala
Kelide ninnaya suddi
Kelide
Neerolu mulugideyante, dodda
Bhara giriya potteyante
Gedde, beru genasa meddeyante
Aha, mooreradariyada taralana matige
Ghora danavana samhara madideyendu ||
Nariyobbala petteyente, hetta
Nariyalanu koideyante
Ninna, narichorana kondeyante
Aha, ooranariyara sooregolluta
Para nariyarabhimana garumadideyendu ||
Turaga ravutanadeyente, ninna
Karadi kadagolu nenu ante
Ninage sari dhareyolagillavante
Aha, varada sri purandara vittalana ninna ee
Pari pari mahimeya harishisutali nanu ||
ಭಕ್ತಿಗೀತೆ
ಕೇಳಿದೆ
ನಿನ್ನಯ ಸುದ್ಧಿ
ಕೇಳಿದೆ
ನೀರೊಳು ಮುಳುಗಿದೆಯಂತೆ ,ದೊಡ್ಡ
ಭಾರ ಗಿರಿಯ ಪೊತ್ತೆಯೆಂತೆ
ಗೆಡ್ಡೆ ,ಬೇರು ಗೆಣಸ ಮೆದ್ದೆಯೆಂತೆ
ಅಹ, ಮೂರೆರಡರಿಯದ ತರಳನ ಮಾತಿಗೆ
ಘೋರ ದಾನವನ ಸಂಹಾರ ಮಾಡಿದೆಯೆಂದು ।।ಕೇಳಿದೆ ।।
ನಾರಿಯೊಬ್ಬಳ ಪೆತ್ತೆಯೆಂತೆ ,ಹೆತ್ತ
ನಾರಿಯಳನು ಕೋಯ್ದೆಯೆಂತೆ
ನಿನ್ನ ,ನಾರೀಚೋರನ ಕೊಂದೆಯೆಂತೆ
ಅಹ, ಊರನಾರಿಯರ ಸೂರೆಗೊಳ್ಳುತ
ಪರ ನಾರಿಯರಭಿಮಾನ ಗಾರುಮಾಡಿದೆಯೆಂದು ।।ಕೇಳಿದೆ ।।
ತುರಗ ರಾವುತನಾದೆಯೆಂತೆ, ನಿನ್ನ
ಕರದಿ ಕಡಗೋಲು ನೇಣ೦ತೆ
ನಿನಗೆ ಸರಿ ಧರೆಯೊಳಗಿಲ್ಲವಂತೆ
ಅಹ, ವರದ ಶ್ರೀ ಪುರಂದರ ವಿಠ್ಠಲನ ನಿನ್ನ ಈ
ಪರಿಪರಿ ಮಹಿಮೆಯ ಹರುಷಿಸುತಲಿ ನಾನು ।।ಕೇಳಿದೆ।।

No comments:
Post a Comment