Purandara dasara keerthanegalu
Song link: Click Here
Raga: Kamboji
Tala: Triputatala
Krishnamurthy kannu munde nintidantide
Kastagalellava pariharisi mana distarthagalanella
Kottu rakshisuvantha..
Masthakadalli manikada kireeta
Kasturi tilakadindeseva lalata
Shistili kolalanooduva orenota
Koustubha edabladali olata ||
Ghama ghamisuva sobagina suligurulu
Chiguru tulasi vanamaleya koralu
Bhage bhage honnunguravitta beralu
Sogasina nabhiya tavareyaralu ||
Ududara oddyana nikhilabharana
Uduge peetambara ravi shatakirana
Kadaga noopura gejje galanitta charana
Odeya sri purandara vittalana karuna || sri
ಭಕ್ತಿಗೀತೆ
ಕೃಷ್ಣಮೂರ್ತಿ ಕಣ್ಣುಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲವ ಪರಿಹರಿಸಿ ಮನ ದಿಷ್ಟಾರ್ಥಗಳನೆಲ್ಲ
ಕೊಟ್ಟು ರಕ್ಷಿಸುವಂಥ ..
ಮಸ್ತಕದಲ್ಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲ ನೂದುವ ಓರೆನೋಟ
ಕೌಸ್ತುಭ ಎಡಬಲದಲಿ ಓಲಾಟ ।।೧।।
ಘಮಘಮಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿವನಮಾಲೆಯ ಕೊರಳು
ಬಗೆಬಗೆ ಹೊನ್ನುಂಗುರವಿಟ್ಟ ಬೆರಳು
ಸೊಗಸಿನ ನಾಭಿಯ ತಾವರೆಯರಳು ।।೨।।
ಉಡುದಾರ ಒಡ್ಯಾಣ ನಿಖಿಲಾಭರಣ
ಉಡುಗೆ ಪೀತಾಂಬರ ರವಿ ಶತಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಶ್ರೀ ಪುರಂದರ ವಿಠ್ಠಲನ ಕರುಣ ।।೩।। ಶ್ರೀ

No comments:
Post a Comment