Purandara Dasara Keertanegalu
Song link: Click Here
Raga: Nadhanamakriye
Tala: Atatala
Dasana madiko enna, swami
Sasiranamada venkata ramana ||
Durbuddhigalanella bidiso
Ninna karuna kavachavenna haranakke todiso
Charanaseeve enage kodiso, abhaya
Karapushpava enna shiradalli mudiso ||
Drudda bhakti ninnali bedi, na
Adigeraguvenayya anudina padi
Kadegannalekenna nodi, biduve
Kodu ninna dhyanava mana shuchimadi ||
Mo re hokkavara kava birudu, enna
Mareyade rakshane madayya poredu
Duritagalellava taridu, siri
Purandara vittala ennanu poredu ||
ಭಕ್ತಿಗೀತೆ
ದಾಸನ ಮಾಡಿಕೋ ಎನ್ನ ,ಸ್ವಾಮಿ
ಸಾಸಿರನಾಮದ ವೆಂಕಟ ರಮಣ
ದುರ್ಬುದ್ಧಿಗಳನೆಲ್ಲ ಬಿಡಿಸೊ
ನಿನ್ನ ಕರುಣಕವಚವೆನ್ನ ಹರಣಕ್ಕೆ ತೊಡಿಸೊ
ಚರಣಸೇವೆ ಎನಗೆ ಕೊಡಿಸೊ , ಅಭಯ
ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ।।೧।।
ದೃಢಭಕ್ತಿ ನಿನ್ನಲಿ ಬೇಡಿ , ನಾ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಲೇಕೆನ್ನೆ ನೋಡಿ, ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।
ಮೊರೆಹೊಕ್ಕವರ ಕಾವ ಬಿರುದು, ಎನ್ನ
ಮರೆಯದೆ ರಕ್ಷಣೆಮಾಡಯ್ಯಾ ಪೊರೆದು
ದುರಿತಗಳೆಲ್ಲವ ತರಿದು, ಸಿರಿ
ಪುರಂದರ ವಿಠ್ಠಲ ಎನ್ನನು ಪೊರೆದು ।।೩।। ಶ್ರೀ

No comments:
Post a Comment