Amma ninna tolinalli, kanda nanu
Ninna sanga aadalendu, bande nanu
Oho.. sanna sanna hoovinallu kande neenu
Bannada bannada chitteyallu neene ninu
O.. o.. Amma!
Neenu itta hannugale anna nanage
Ninna madilinale nanna haasige
Beesi banda galiyallu ninna maye
Hariyuva nadiyallu ninna chaye.. amma!
Ooru beda keri beda yaru beda
Amma omme kannu bittu nanna noda
Tayi tande bandhu balaga neene ella
Ninaginta bere devarilla.. amma!
ಚಿತ್ರಗೀತೆ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಒಹೋ .. ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಓ.. ಓ.. ಅಮ್ಮ !
ನೀನು ಇಟ್ಟ ಹಣ್ಣುಗಳೇ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲ್ಲೂ ನಿನ್ನ ಛಾಯೆ .. ಅಮ್ಮ !
ಊರುಬೇಡ ಕೇರಿಬೇಡ ಯಾರೂ ಬೇಡ
ಅಮ್ಮ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡ
ತಾಯಿ ತಂದೆ ಬಂಧು ಬಳಗ ನೀನೆ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲ.. ಅಮ್ಮ!

No comments:
Post a Comment