Bhaktigeete
Purandara Dasara Keerthanegalu
Song link:Click Here
Tala: Atatala
Na ninnaolanya beduvudilla
Enna hrudaya kamaladolu
Nindiru hariye
Na ninnaolanya beduvudilla ||
Shira ninna charanake eragali
Enna chakshu sada ninna nodali hariye
Karna geetangala kelali
Ninna nirmalyava nasavagranisali hariye ||
Nalige ninna kondadali
Enna karagaleradu ninnarchisali hariye
Charana teertayatre madali
Enna mana anudina ninna smarisali hariye ||
Buddhi ninnolu berethogali
Enna chitta ninnolu stiravagirali hariye
Bhakta janara sangavagali
Purandara vittalane este dayamadu hariye || Sri
ಭಕ್ತಿಗೀತೆ
ನಾ ನಿನ್ನೊಳನ್ಯ ಬೇಡುವುದಿಲ್ಲ
ಎನ್ನ ಹೃದಯಕಮಲದೊಳು ನಿಂದಿರು ಹರಿಯೆ
ನಾ ನಿನ್ನೊಳನ್ಯ ಬೇಡುವುದಿಲ್ಲ।।ಪ ।।
ಶಿರ ನಿನ್ನ ಚರಣಕೆ ಎರಗಲಿ
ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ
ನಿನ್ನ ನಿರ್ಮಾಲ್ಯವ ನಾಸವಾಗ್ರಾಣಿಸಲಿ ಹರಿಯೆ ।।೧।।
ನಾಲಿಗೆ ನಿನ್ನ ಕೊಂಡಾಡಲಿ
ಎನ್ನ ಕರಗಳೆರಡು ನಿನ್ನರ್ಚಿಸಲಿ ಹರಿಯೆ
ಚರಣ ತೀರ್ಥಯಾತ್ರೆ ಮಾಡಲಿ
ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ ।।೨।।
ಭುದ್ಧಿ ನಿನ್ನೊಳು ಬೆರೆತೋಗಲಿ
ಎನ್ನ ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆ
ಭಕ್ತ ಜನರ ಸಂಗವಾಗಲಿ
ಪುರಂದರ ವಿಠ್ಠಲನೇ ಇಷ್ಟೆ ದಯಮಾಡು ಹರಿಯೆ ।।೩।। ಶ್ರೀ

No comments:
Post a Comment