Monday, March 7, 2022

Yava Mohana Murali Kareyitu (ಯಾವ ಮೋಹನ ಮುರಳಿ ಕರೆಯಿತು )

Bhavageete

Sahitya: M Gopalakrishna Adiga

Song link :Click Here




Yava mohana murali kareyitu

Doora teerake ninnanu..


Yava mohana murali kareyitu

Doora teerake ninnanu

Yava brindavanavu seleyitu

Ninna mannina kannanu..


Hoovu haasige chandra chandana

Bahu bhandana chumbana

Bayake tootada beliyolage

Karana ganadee ringana ||


Sapthasagaradache ello 

Supthasagara kaadide

Moreyadalegala mooka marmara

Indu illigu haayite ||


vivashavaayitu prana ha

Paravashavu nin ee chetana

Iruvudellava bittu, iradudaredege 

Tudivude jeevana ||


Yava mohana murali kareyitu

Eddakiddode ninnanu ?

Yava brindavanavu chachitu

Tanna minchina kaiyanu ?


ಭಾವಗೀತೆ 


ಯಾವ ಮೋಹನ ಮುರಳಿ ಕರೆಯಿತು 

ದೂರ ತೀರಕೆ ನಿನ್ನನು 

ಯಾವ ಬೃಂದಾವನವು ಸೆಳೆಯಿತು 

ನಿನ್ನ ಮಣ್ಣಿನ ಕಣ್ಣನು 


ಹೂವು ಹಾಸಿಗೆ ಚಂದ್ರ ಚಂದನ 

ಬಾಹುಬಂಧನ ಚುಂಬನ 

ಬಯಕೆ ತೋಟದ ಬೇಲಿಯೊಳಗೆ 

ಕರಣ ಗಣದೀ ರಿಂಗನ ।।೧।।


ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ 

ಮೊಳೆಯದಲೆಗಳ ಮೂಕ ಮರ್ಮರ 

ಇಂದು ಇಲ್ಲಿಗೂ ಹಾಯಿತೆ ।।೨।।


ವಿವಶವಾಯಿತು ಪ್ರಾಣ ಹಾ ! 

ಪರವಶವು ನಿನ್ನೀ ಚೇತನ 

ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ 

ತುಡಿವುದೆ ಜೀವನ ।।೩।।


ಯಾವ ಮೋಹನ ಮುರಳಿ ಕರೆಯಿತು 

ಇದ್ದಕಿದ್ದೊಡೆ ನಿನ್ನನು ?

ಯಾವ ಬೃಂದಾವನವು ಚಾಚಿತು 

ತನ್ನ ಮಿಂಚಿನ ಕೈಯನು ?





No comments:

Post a Comment