Bhavageete
Sahitya: K S Narasimhaswamy
Song link: Click Here
Dande - Garland of flowers
Heralu - Braid
Aluve tutige bandante
Chinte bidi hoova mudidante
Hattu kade kannu
Sannage deepa uridante
Jeevadali jatre mugidante ||modala||
Eradaneya hagalu ilimukhavilla
Istu nagu
Muguthiya minchu olahorage
Neerolage veene mididante aadidha maatu
Beliyali haavu haridante ||
Mooraneya sanje heralina tumba
Dande hoo
Hooviguu jeeva bandante
Sanjeyali ratri ilidante biru baniguu
Hunnimeya haalu haridante ||
ಭಾವಗೀತೆ
ಮೊದಲ ದಿನ ಮೌನ
ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ ।।ಮೊದಲ ।।
ಎರಡನೆಯ ಹಗಲು ಇಳಿಮುಖವಿಲ್ಲ
ಇಷ್ಟು ನಗು
ಮೂಗುತಿಯ ಮಿಂಚು ಒಳಹೊರಗೆ
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ ।।ಮೊದಲ ।।
ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ
ಹೂವಿಗೂ ಜೀವ ಬಂದಂತೆ
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ ।।ಮೊದಲ ।।

No comments:
Post a Comment