Thursday, March 3, 2022

Indu Enage Sri Govinda (ಇಂದು ಎನಗೆ ಶ್ರೀ ಗೋವಿಂದ)

Bhaktigeete

By Sri Raghavendra Swamy

Song link: Click Here


Indu enage sri govinda, govinda

Ninnaya padaravindava toro mukunda, indire ramana


Indu enage sri govinda, govinda


Sundara vadanane nandagopana kanda

Mandaroodhara aananda, indire ramana


Nondenayya bhava bhandanadolu siluki

Munde daari kanade, kundide jagadolu

kandanantendenna kundugalenisade

Tande kayo krishna kandarpa janakane ||


Moodathanadi balu hedi jeevananagi

Drudabhakutiyanu na madalillavo deva, deva

Nodallillavo ninna, padallillavo mahime

Gadigara krishna bedikombeno ninna ||


Dharuniyali bhubhara jeevananagi

Dari tappi nadede seride kujanara

Aaruu kayuvarilla, seride ninagayya

Dheera venugopala paraganiso hariye ||


ಭಕ್ತಿಗೀತೆ 


ಇಂದು ಎನಗೆ ಶ್ರೀ ಗೋವಿಂದ 

ನಿನ್ನಯ ಪಾದಾರವಿಂದವ, ತೋರೊ ಮುಕುಂದ 

ಇಂದಿರೆ ರಮಣ 


ಸುಂದರ ವದನನೇ, ನಂದ ಗೋಪಿಯ ಕಂದ 

ಮಂದರೋದ್ಧಾರ ಆನಂದ , ಇಂದಿರೆ ರಮಣ 


ನೊಂದೆನಯ್ಯ ಭವ ಬಂಧನದೊಳು ಸಿಲುಕಿ 

ಮುಂದೆ ದಾರಿ ಕಾಣದೆ, ಕುಂದಿದೆ ಜಗದೊಳು 

ಕಂದನಂತೆ೦ದೆನ್ನ  ಕುಂದುಗಳೆನಿಸದೆ 

ತಂದೆ ಕಾಯೋ ಕೃಷ್ಣ ಕಂದರ್ಪಜನಕನೆ ।।೧।।


ಮೂಢತನದಿ ಬಹು ಹೇಡಿ ಜೀವನನಾಗಿ 

ದೃಢಭಕುತಿಯನು ನಾ ಮಾಡಲಿಲ್ಲವೊ ದೇವ 

ನೋಡಲಿಲ್ಲವೋ ನಿನ್ನ, ಪಾಡಲಿಲ್ಲವೋ  ಮಹಿಮೆ 

ಗಾಡಿಗಾರ ಕೃಷ್ಣ ಬೇಡಿಕೊಂಬೆನೊ ನಿನ್ನ ।।೨।।


ಧಾರುಣಿಯಲಿ ಭೂಭಾರ ಜೀವನನಾಗಿ 

ದಾರಿತಪ್ಪಿ ನಡೆದೆ ಸೇರಿದೆ ಕುಜನರ 

ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ 

ಧೀರ ವೇಣುಗೋಪಾಲ ಪಾರಗಾಣಿಸೋ ಹರಿಯೆ ।।೩।।








No comments:

Post a Comment