Sunday, March 13, 2022

Aadisi Nodu Beelisi Nodu (ಆಡಿಸಿ ನೋಡು , ಬೀಳಿಸಿ ನೋಡು)

  • Movie: Kasturi Nivasa (1971)
  • Singer: P B Srinivas
  • Song link: Click Here


Aadisi nodu beelisi nodu uruli hogadu (2)

Ene barali, yaarigu sotu taleya bagadu

Endigu nanu hege eruve endu naguvudu

Heege nagutaliruvudu ||


Gudisale aagali aramane aagali, aata nilladu

Hiriyare erali kiriyare barali, beda toradu

Kastavo sukhavo alukade aadi tugutiruvudu

Tugutiruvudu ||


Maiyane hindi nondaru kabbu, sihiya koduvudu

Teyutaliddaru gandhada parimala, tumbi baruvudu

Tane uridaru deepavu manege belaka taruvudu

Deepa belaka taruvudu ||


Aadisuvathana kai chalakadali, ella adagide

Aatana karuneya jeevava tumbi, kunisi naliside

Aa kai sotare bombeya katheyu koneyaguvude

koneyaguvude ||



ಚಿತ್ರಗೀತೆ 


ಆಡಿಸಿ ನೋಡು , ಬೀಳಿಸಿ ನೋಡು ಉರುಳಿ ಹೋಗದು (೨)

ಏನೇ  ಬರಲಿ ಯಾರಿಗು ಸೋತು ತಲೆಯ ಬಾಗದು 

ಎಂದಿಗು ನಾನು ಹೀಗೆ ಇರುವೆ ಎಂದು ನಗುವುದು 

ಹೀಗೆ ನಗುತಲಿರುವುದು ।।ಪ ।।


ಗುಡಿಸಲೆ ಆಗಲಿ, ಅರಮನೆಯಾಗಲಿ ಆಟ ನಿಲ್ಲದೂ  

ಹಿರಿಯರೆ ಇರಲಿ, ಕಿರಿಯರೆ ಬರಲಿ ಭೇದ ತೋರದು 

ಕಷ್ಟವೊ  ಸುಖವೊ ಅಳುಕದೆ ಆಡಿ ತೂಗುತಿರುವುದು  

ತೂಗುತಿರುವುದು ।।೧।।


ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು 

ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು 

ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು 

ದೀಪಾ ಬೆಳಕ ತರುವುದು ।।೨।।


ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ 

ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ 

ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ  

ಕೊನೆಯಾಗುವುದೇ  ।।೩।।







No comments:

Post a Comment