Wednesday, December 29, 2021

Onde Bari Nanna Nodi (ಒಂದೇ ಬಾರಿ ನನ್ನ ನೋಡಿ )

Bhavageete

Sahitya: Da Ra Bendre

Song link: Click Here


Onde bari nanna nodi

Manda nagi hanga beeri

Munda munda munda hoda

Hinda nodada gelati hinda nodada..


Gali heggi hidida suganda 

Atta atta hoguvanda

Hota manasu avana hinda

Hinda nodada gelati hinda nodada ||onde||


Nanda nanaga echhrila

Mandi godavi ena nanaga

Onde alati nadedada chitta

Hinda nodada gelati hinda nodada ||onde||


Suji hinda daradhanga

Koladolage jaridhanga

Hota hinde baradhanga

Hinda nodada gelati hinda nodada ||onde||



ಭಾವಗೀತೆ 


ಒಂದೇ ಬಾರಿ ನನ್ನ ನೋಡಿ 

ಮಂದ ನಗಿ ಹಾಂಗ ಬೀರಿ (೨)

ಮುಂದ ಮುಂದ ಮುಂದ ಹೋದ 

ಹಿಂದ ನೋಡದ ಗೆಳತಿ ಹಿಂದ ನೋಡದ !


ಗಾಳಿ ಹೆಜ್ಜಿ ಹಿಡಿದ ಸುಗಂಧ 

ಅತ್ತ ಅತ್ತ ಹೋಗುವಂದ (೨)

ಹೋತ ಮನಸು ಅವನ ಹಿಂದ 

ಹಿಂದ ನೋಡದ ಗೆಳತಿ ಹಿಂದ ನೋಡದ ! ।।೧।।


ನಂದ ನನಗ ಎಚ್ಚರಿಲ್ಲ 

ಮಂದಿ ಗೊಡವಿ ಏನ ನನಗ (೨)

ಒಂದೇ ಅಳತಿ ನಡೆದದ ಚಿತ್ತ 

ಹಿಂದ ನೋಡದ ಗೆಳತಿ ಹಿಂದ ನೋಡದ ! ।।೨।।


ಸೂಜಿ ಹಿಂದ ದರಧಾಂಗ 

ಕೊಳದೊಳಗ ಜಾರಿಧಾಂಗ 

ಹೋತ ಹಿಂದ ಬರಧಾಂಗ 

ಹಿಂದ ನೋಡದ ಗೆಳತಿ ಹಿಂದ ನೋಡದ ! ।।೩।।

                                       








No comments:

Post a Comment