Tuesday, December 28, 2021

Gajamukhane ganapatiye (ಗಜಮುಖನೆ ಗಣಪತಿಯೆ)

 Bhaktigeete

Lyrics by vijaya Narashima

Song link: Click Here



Gajamukhane ganapatiye 

ninage ondane

Nambidavara balina 

Kalpataru nene


Bhadrapada shuklada chautiyendu

Ne mane mane gu dayamadi 

harasu endu

Ninna sannidanake tale bagi 

kayya mugidu

Beduva bhaktarige ne daya sindhu ||gajamukhane||


Erelu lokada anu anuvina

Eha parada sadhanake nine karana

Ninolume notada ondu honna kirana

Nididare sakayya janma pavana ||gajamukhane||


Parvati parashivana prema putrane

Palisuva paradaiva bere kane

Papada pankadali paduma enisu enna

Pada seve onde dharma sadhana ||gajamukhane||


ಭಕ್ತಿಗೀತೆ 


ಗಜಮುಖನೆ  ಗಣಪತಿಯೆ  ನಿನಗೆ  ವಂದನೆ 

ನಂಬಿದವರ  ಬಾಳಿನ  ಕಲ್ಪತರು  ನೀನೆ ।।ಪ ।।


ಭಾದ್ರಪದ  ಶುಕ್ಲದ  ಚೌತಿಯಂದು 

ನೀ  ಮನೆ  ಮನೆಗು  ದಯಮಾಡಿ  ಹರಸು  ಎಂದು 

ನಿನ್ನ  ಸನ್ನಿಧಾ ನಕೆ  ತಲೆಬಾಗಿ  ಕೈಯ  ಮುಗಿದು 

ಬೇಡುವ  ಭಕ್ತರಿಗೆ  ನೀ  ದಯಾ  ಸಿಂಧು ।।೧।।


ಈರೇಳು  ಲೋಕದ  ಅಣು  ಅಣುವಿನ 

ಇಹಪರದ  ಸಾಧನಕೆ  ನೀನೆ  ಕಾರಣ 

ನಿನ್ನೂಲುಮೆ  ನೋಟದ  ಒಂದು  ಹೊನ್ನ  ಕಿರಣ 

ನೀಡಿದರೆ  ಸಾಕಯ್ಯ  ಜನ್ಮ  ಪಾವನ ।।೨।।


ಪಾರ್ವತಿ ಪರಶಿವನ ಪ್ರೇಮ ಪುತ್ರನೇ

ಪಾಲಿಸುವ ಪರದೈವ ಬೇರೆ ಕಾಣೆ

ಪಾಪದ ಪಂಕದಲಿ ಪದುಮ ಎನಿಸು ಎನ್ನ

ಪಾದ ಸೇವೆ ಒಂದೇ ಧರ್ಮ ಸಾಧನ ।।೩।।



No comments:

Post a Comment