Wednesday, December 29, 2021

Kaanada kadalige (ಕಾಣದ ಕಡಲಿಗೆ)

Bhavageete

Lyrics by G S Shivarudrappa

Song link: Click Here


Kaanada kadalige hambaliside mana

Kaanaballene ondu dina

Kadalanu kudaballene ondu dina

Kaanada kadalige hambaliside mana..


Kaanada kadalina moretada jogula

Olgivigendo kelutide

Nanna kalpaneyu tanna kadalane

Chitrisi chintisi suyyutide

Elliruvudo adu entiruvudo adu

Nodaballene ondu dina

Kadalanu koodaballene ondu dina ||kaanada||


Saavira holegalu tumbi haridaru

Onde samanagihudante

Suneela vistara taranga shobita

Gambirambudi tanante

Munnirante aparavante

Kaanaballene ondu dina

Adarolu karagalarene ondu dina ||kaanada||


Jatila kannanada kutila pathagalali

Hariva toreyu nanu

Endigadaru kaanada kadalige

 seraballenenu

Serabahude nanu

Kadala neeliyolu karagabahude nanu

Karagabahude nanu, karagabahude

 nanu....


ಭಾವಗೀತೆ 


ಕಾಣದ ಕಡಲಿಗೆ.. ಹಂಬಲಿಸಿದೆ ಮನ (೨)

ಕಾಣಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ.. ಹಂಬಲಿಸಿದೆ ಮನ.. 


ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗೆಂದೊ  ಕೇಳುತಿದೆ (೨)

ನನ್ನ ಕಲ್ಪನೆಯು ತನ್ನ ಕಡಲನೇ 

ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 

ಎಲ್ಲಿರುವುದೋ ಅದು ಎಂತಿರುವುದೋ ಅದು 

ನೋಡಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ ।।ಕಾಣದ ।।



ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ (೨)

ಸುನೀಲ ವಿಸ್ತರ ತರಂಗ ಶೋಭಿತ 

ಗಂಭೀರಾಂಬುಧಿ ತಾನಂತೆ 

ಮುನ್ನಿರಂತೆ ,ಅಪಾರವಂತೆ 

ಕಾಣಬಲ್ಲೆನೆ ಒಂದು ದಿನ 

ಅದರೊಳು ಕರಗಲಾರೆನೆ ಒಂದು ದಿನ ।।ಕಾಣದ ।।


ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು 

ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆನೇನು (೨)

ಸೇರಬಹುದೆ ನಾನು ಕಡಲ ನೀಲಿಯೊಳು 

ಕರಗಬಹುದೇ ನಾನೂ  , ಕರಗಬಹುದೇ ನಾನೂ 

ಕರಗಬಹುದೇ ನಾನೂ .. 



No comments:

Post a Comment