Bhavageete
Sahitya: K S Nisar Ahmed
Song link: Click Here
Nenapagi baradiru mannugudida olave,
Endo nalisida nageya sanchinalli,
Hosa baduka kalegolisalendu na henagiruve,
Holegedisadiru kambaniya kunchadalli ||
Nageya dalagalu uduri baridaada tuti hoovu,
Battagannina sutta kappu moda,
Hrudayadola novugala birisuvare maremaatu,
Mayda gayava matte geechabeda ||
Bhavitavya dosageyali saalagi irisadiru,
Andendo mugidiruva deepagalanu,
Chendada roopagala ondonde tandesedu,
Manadalli bittadiru taapagalanu ||
ಭಾವಗೀತೆ
ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ,
ಎಂದೊ ನಲಿಸಿದ ನಗೆಯ ಸಂಚಿನಲ್ಲಿ,
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ,
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ ।।ಪ।।
ನಗೆಯ ದಳಗಳು ಉದುರಿ ಬರಿದಾದ ತುಟಿ ಹೂವು,
ಬಟ್ಟಗಣ್ಣಿನ ಸುತ್ತ ಕಪ್ಪು ಮೋಡ,
ಹೃದಯದೊಳ ನೋವುಗಳ ಬಿರಿಸುವರೆ ಮರೆಮಾತು,
ಮಾಯ್ದ ಗಾಯವ ಮತ್ತೆ ಗೀಚಬೇಡ ।।೧।।
ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು,
ಅಂದೆಂದೊ ಮುಗಿದಿರುವ ದೀಪಗಳನು,
ಚೆಂದಾದ ರೂಪಗಳ ಒಂದೊಂದೆ ತಂದೆಸೆದು,
ಮನದಲ್ಲಿ ಬಿತ್ತದಿರು ತಾಪಗಳನು ।।೨।।
No comments:
Post a Comment