ಪದ್ಯ
ಸಾಹಿತ್ಯ : ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಇರುವೆ ಇರುವೆ ಬಾ ಇಲ್ಲಿ
ಯಾವ್ಯಾವ್ ಊರು ನೋಡಿದ್ದೀ ?
ಯಾವ್ಯಾವ್ ಊರ್ನಲ್ ಏನೇನ್ ಕಂಡಿ,
ಈಗ ಎಲ್ಲಿಗ್ ಹೊರಟಿದ್ದೀ ?
ಬಾಗಿಲ ಸಂದು, ಗೋಡೆ ಬಿರುಕು
ಬೆಲ್ಲದ ಡಬ್ಬ, ಹಿತ್ಲು
ತಿಂಡೀ ಇರೋ ಹುಡುಗನ ಜೇಬು,
ಹಾಲಿನ ಪತ್ರೆ ಸುತ್ಲೂ.
ಒಂದೊಂದ್ ಊರೂ ಒಂದೊಂದ್ ಥರ
ಬಸ್ಸೇ ಇಲ್ಲದ ಊರ್ಗೆ
ನಡಕೊಂಡ್ಹೋಗೇ ಬಂದಿದೀನಿ
ಚಪ್ಲಿ ಇಲ್ದೇ ಕಾಲ್ಗೆ !
ಸಕ್ಕರೆ ಬಂಡೆ, ಬೆಲ್ಲದ ಬೆಟ್ಟ
ಹಾಲಿನ ಲೋಟದ ಬಾವಿ
ಸುತ್ತಿ ಈಗ ಹಿಡಿದಿದ್ದೀನಿ
ಮತ್ತೆ ಮನೆ ಹಾದಿ .
Padya
Iruve iruve baa illi
Yavyav ooru nodiddee?
Yavyav oornal enen kandi,
Eega ellig horatiddi?
Bagila sandu, gode biruku
Bellada dabba, hitlu
Tindee iro hudugana jebu,
Halina patre sutlu.
Ondond ooru ondond thara
Basse illada oorge
Nadakondhoge bandideeni
Chapli ilde kalge!
Sakkare bande, bellada betta
Haalina lotada baavi
Sutti eega hidididdeeni
Matte mane haadi.
No comments:
Post a Comment